ತುರ್ತು ಸೇವೆಯಲ್ಲಿ ತೊಡಗಿಸಿಕೊಂಡ ಎಸ್ ಎಸ್ ಎಫ್, ಎಸ್ ವೈ ಎಸ್ ತುರ್ತು ಸೇವಾ ತಂಡ ಸುಳ್ಯ

0
330

 

p>

 

 

ಕಳೆದ ದಿನಗಳಿಂದ ಸಂಪಾಜೆ ಕಲ್ಲುಗುಂಡಿ ಸ್ಥಳೀಯ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಪ್ರಾಕೃತಿಕ ವಿಕೋಪಗಳು ಸಂಭವಿಸಿತ್ತಿದ್ದು, ಅಲ್ಲಿಯ ಜನರ ಸಹಾಯಕ್ಕೆ ರಾತ್ರಿ – ಹಗಲೆನ್ನದೆ ಎಸ್ ಎಸ್ ಎಫ್ ಮತ್ತು ಎಸ್ ವೈ ಎಸ್ ತುರ್ತು ಸೇವಾ ತಂಡ ಸುಳ್ಯ ತಮ್ಮ ಎಲ್ಲಾ ಒತ್ತಡಗಳ ಸಮಯವನ್ನು ಬದಿಗಿಟ್ಟು ಪರಿಶ್ರಮಿಸುತ್ತಿದೆ.

 

ಕಲ್ಲುಗುಂಡಿಯ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿದ್ದ ಕಾರುಗಳು ನೀರಿನಲ್ಲಿ ತೇಲಿ ತೋಟದಲ್ಲಿ ಸಿಕ್ಕಿಹಾಕಿಕೊಂಡದನ್ನು ದೂಡಿ ಕೊಂಡು ಹೋಗಿ ಪೋಲಿಸ್ ಸ್ಟೇಷನ್ ಬಳಿ ನಿಲ್ಲಿಸುವುದರಲ್ಲಿ ಯಶಸ್ವಿಯಾದರು.ಕೈಪಡ್ಕ ಸೇತುವೆಯಲ್ಲಿ ಸಿಲುಕಿ ಕೊಂಡ ಮರವನ್ನು ತೆರವು ಗೊಳಿಸುವಲ್ಲಿ ಸಹಕಾರಿಯಾಗಿದರು. ಕಡೆಪಾಲದ ಸೇತುವೆಗೆ ಬಾರಿ ಗಾತ್ರದ ಮರವೊಂದು ಬಿದ್ದಿದ್ದು ಅದನ್ನು ಮೆಷಿನ್ ಮೂಲಕ ಕಟ್ ಮಾಡಿ ತೆರವುಗೊಳಿಸುವಲ್ಲಿ ನೆರವಾದರು.ಗೂನಡ್ಕ ಪೇರಡ್ಕದಲ್ಲಿ ಸತತ ಎರಡು ಬಾರಿ ಮನೆಯೊಳಗೆ ಬಂದ ನೀರಿನ ಪರಿಣಾಮವಾಗಿ ಮನೆ ಸಾಮಾನುಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುವುದರಲ್ಲಿ ಎಸ್ ಎಸ್ ಎಫ್, ಎಸ್ ವೈ ಎಸ್ ತುರ್ತು ಸೇವಾ ತಂಡ ಸುಳ್ಯ ಕೈ ಜೋಡಿಸಿದ್ದಾರೆ.

LEAVE A REPLY

Please enter your comment!
Please enter your name here