ಕ್ಯಾನ್ಸರ್ ಪೀಡಿತ ಬಾಲಕಿಗೆ ಡಾ. ರೇಣುಕಾಪ್ರಸಾದ್ ರಿಂದ ಧನಸಹಾಯ

0

 

 

ರಾಜ್ಯ ಒಕ್ಕಲಿಗರ ಗೌಡ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ರವರು ಅರಂತೋಡಿನಲ್ಲಿರುವ ಕ್ಯಾನ್ಸರ್ ಪೀಡಿತ ಬಾಲಕಿಗೆ ರೂ. 10,000 ಧನಸಹಾಯ ನೀಡಿದರು.

ಅರಂತೋಡು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿರುವ ಲಲಿತ(ರೇಷ್ಮಾ) ಮತ್ತು ಯೋಗೀಶ್ ದಂಪತಿಯ ಎರಡನೇ ಪುತ್ರಿ ಖುಷಿ ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, ಸಹಾಯ ಹಸ್ತಕ್ಕಾಗಿ ಮನವಿ ಮಾಡಿದ್ದರು. ಈ ವರದಿ ಸುದ್ದಿ ನ್ಯೂಸ್ ವೆಬ್‌ಸೈಟ್ ಹಾಗೂ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಸಾರವಾಗಿತ್ತು. ಇದಕ್ಕೆ ಸ್ಪಂದಿಸಿದ ಡಾ. ರೇಣುಕಾ ಪ್ರಸಾದ್ ರವರು ಇಂದು ಧನಸಹಾಯ ನೀಡಿದರು.

ಈ ಸಂದರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಡಾ ಉಜ್ವಲ್‌ ಊರುಬೈಲು, ಅರಂತೋಡು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್‌ ಕುತ್ತಮೊಟ್ಟೆ, ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಎ,ಓ.ಎಲ್.ಇ. ಕಛೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ ಉಪಸ್ಥಿತರಿದ್ದರು.