ಮದೆನಾಡು ಗುಡ್ಡ ಜರಿಯುವ ಭೀತಿ : ಮಡಿಕೇರಿ ರಸ್ತೆ ಬಂದ್ ಹಿನ್ನಲೆ

0

 

 

ಸಂಪಾಜೆ ಗೇಟ್ ನಲ್ಲಿ ಸಾಲು ಗಟ್ಟಿನಿಂತ ವಾಹನ : ಪ್ರಯಾಣಿಕರ ಒತ್ತಾಯಕ್ಕೆ ಮಣಿದು ಸಂಚಾರಕ್ಕೆ ಅವಕಾಶ

 

ಮಡಿಕೇರಿಯ ಮದೆನಾಡು ಎಂಬಲ್ಲಿ ಮುಖ್ಯ ರಸ್ತೆಯ ಬದಿಯ ಗುಡ್ಡ ಜರಿಯುವ ಭೀತಿಯಿಂದ ಕೊಡಗು ಜಿಲ್ಲಾಡಳಿತ ಆ ರಸ್ತೆಯಾಗಿ ವಾಹನ ನಿರ್ಬಂಧಿಸಿದ ಹಾಗೂ ರಾತ್ರಿ ವೇಳೆ ಮಡಿಕೇರಿ ಯಿಂದ ಅದೇ ಮಾರ್ಗವಾಗಿ ವಾಹನಗಳು ಬರುತ್ತಿರುವುದನ್ನು ಕಂಡ ಸಂಪಾಜೆಯಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನದಲ್ಲಿದ್ದ ಪ್ರಯಾಣಿಕರು ಜಿಲ್ಲಾಡಳಿತದ ನಡೆಯ ವಿರುದ್ಧ ಆಕ್ರೋಶಗೊಂಡ ಹಾಗೂ ಪ್ರಯಾಣಿಕರ ಒತ್ತಾಯಕ್ಕೆ ಮಣಿದು ವಾಹನ ಸಂಚಾರಕ್ಕೆ ಅವಕಾಶ ನೀಡಿರುವ ಘಟನೆ ವರದಿಯಾಗಿದೆ.

 

ಮದೆನಾಡು ಬಳಿ ಗುಡ್ಡ ಜರಿಯುವ ಭೀತಿಯಿಂದ ಆ ರಸ್ತೆಯಲ್ಲಿ ವಾಜನ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶ ಮಾಡಿತ್ತು. ಇದರಿಂದಾಗಿ ಆ.9 ರಂದು ಸಂಜೆಯಿಂದ ಸಂಪಾಜೆ ಗೇಟು ಬಂದ್ ಮಾಡಲಾಯಿತು. ಪರಿಣಾಮ ಸಂಪಾಜೆ ಗೇಟಿನಲ್ಲಿ ವಾಹನ ಸಾಲು ಗಟ್ಟಿ ನಿಂತಿತ್ತು. ರಾತ್ರಿಯ ವೇಳೆಗೆ ಸಂಪಾಜೆ ರಸ್ತೆಯಲ್ಲಿ ವಾಹನಗಳ ಸಾಲು ಸಾಲು ನಿಂತಿತು.

ರಾತ್ರಿ ಮಡಿಕೇರಿ ಯಿಂದ ವಾಹನಗಳು ಮದೆನಾಡಾಗಿ ಸಂಪಾಜೆಗೆ ಬಂತು. ಇದನ್ನು ಗಮನಿಸಿದ ಸಂಪಾಜೆಯಲ್ಲಿದ್ದ ವಾಹನಗಳ ಪ್ರಯಾಣಿಕರು ಸಂಪಾಜೆ ಗೇಟಿನಲ್ಲಿದ್ದ ಪೋಲೀಸರನ್ನು ಪ್ರಶ್ನಿಸ ತೊಡಗಿದರು. ಈ ವಿಚಾರ ಕೊಡಗು ಜಿಲ್ಲಾಧಿಕಾರಿ ಗಳಿಗೆ ತಲುಪಿ, ರಾತ್ರಿಯೇ ಎಡಿಸಿ ಯವರನ್ನು ಸಂಪಾಜೆ ಗೇಟಿಗೆ ಕಳುಹಿಸಲಾಯಿತು. ಅಲ್ಲಿ ಕೆಲ ಕಾಲ ಸಮಾಲೋಚನೆ ನಡೆದು ಪ್ರಯಾಣಿಕರ ಒತ್ತಾಯದ ಮೇರೆಗೆ ಗೂಡ್ಸ್ ಲಾರಿಗಳನ್ನು ಹೊರತು ಪಡಿಸಿ‌ಇತರ ಎಲ್ಲ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು. ಆ.10 ರಂದು ಬೆಳಗ್ಗೆ 6 ಗಂಟೆಯಿಂದ ಗೂಡ್ಸ್ ವಾಹನ ಸಂಚಾರಕ್ಕೂ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.