ಸೋಣಂಗೇರಿ ಬಳಿ ರಸ್ತೆ ಮಧ್ಯದಲ್ಲಿ ಅಪಾಯಕಾರಿ ಹೊಂಡ

0

 

ಎಚ್ಚರ ತಪ್ಪಿದರೆ ದ್ವಿಚಕ್ರ ವಾಹನ ಸವಾರರಿಗೆ ಕಾದಿದೆ ಅಪಾಯ

ಸುಳ್ಯ ಸೋಣಗೇರಿ ಮುಖ್ಯ ರಸ್ತೆ ಸರ್ಕಾರಿ ಶಾಲೆಯ ಬಳಿ ತಿರುವಿನಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರಿಗೆ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.

ಪೈಚಾರಿನಿಂದ ಸೋಣಂಗೇರಿವರೆಗೆ ರಸ್ತೆ ಅಭಿವೃದ್ಧಿ ಸಮಯದಲ್ಲಿ ಈ ಭಾಗದ ರಸ್ತೆಯಲ್ಲಿ ಅಲ್ಪ ಪ್ರಮಾಣದ ಹೊಂಡಗಳು ನಿರ್ಮಾಣವಾಗಿದ್ದವು. ಆದರೆ ಇದೀಗ ಮಳೆಯ ಕಾರಣದಿಂದ ಹೊಂಡ ಬೃಹತ್ ಆಕಾರಕ್ಕೆ ಮಾರ್ಪಾಡಾಗಿದ್ದು ಕಳೆದ ಕೆಲವು ದಿನಗಳಿಂದ ಹಲವಾರು ದ್ವಿಚಕ್ರ ವಾಹನ ಸವಾರರು ಈ ಹೊಂಡದಲ್ಲಿ ಆಯ ತಪ್ಪಿ ಬಿದ್ದು ಕೈ ಕಾಲುಗಳನ್ನು ಗಾಯ ಮಾಡಿಕೊಂಡ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here