ಮೇನಾಲ : ವರಮಹಾಲಕ್ಷ್ಮಿ ಪೂಜೆ

0

ಸಂಸ್ಕಾರಯುತ ಶಿಕ್ಷಣದಿಂದ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯ: ಸಾಧ್ವಿ ಮಾತಾನಂದಮಯಿ

ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಿ ಪೋಷಕರು ಬೆಳೆಸಬೇಕು. ಎಳವೆಯಲ್ಲಿಯೇ ಭಜನೆ ಇನ್ನಿತರ ಧಾರ್ಮಿಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಿದಲ್ಲಿ ಒಳ್ಳೆಯ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಎಂದು ಒಡಿಯೂರು ಕ್ಷೇತ್ರದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಹೇಳಿದರು.
ಅವರು ಆ. ೫ರಂದು ವಿಷ್ಣು ಗೇಮ್ಸ್ ಕ್ಲಬ್ ಮೇನಾಲ, ವರಮಹಾಲಕ್ಷ್ಮಿ ಪೂಜಾ ಸಮಿತಿ ಮೇನಾಲ ಇದರ ಆಶ್ರಯದಲ್ಲಿ ನಡೆದ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸಭಾ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶಿಲ್ಪ ಸುಭೋದ್ ಶೆಟ್ಟಿ ಮೇನಾಲ ವಹಿಸಿದ್ದರು. ವೇದಿಕೆಯಲ್ಲಿ ವಿಷ್ಣು ಗೇಮ್ಸ್ ಕ್ಲಬ್ ಮೇನಾಲ ಇದರ ಅಧ್ಯಕ್ಷರಾದ ಸುನಿಲ್ ರೈ ಇರಂತಮಜಲು, ಶ್ರೀಕೃಷ್ಣ ಭಜನಾ ಮಂದಿರ ಮೇನಾಲ ಇದರ ಅಧ್ಯಕ್ಷರಾದ ಕಮಲಾಕ್ಷ ರೈ ಮೇನಾಲ ಉಪಸ್ಥಿತರಿದ್ದರು.
ಪೂಜಾ ಕಾರ್‍ಯಕ್ರಮ ಆರಂಭವಾದ ಬಳಿಕ ಶ್ರೀಕೃಷ್ಣ ಮಕ್ಕಳ ಭಜನಾ ತಂಡದಿಂದ ಭಜನಾ ಕಾರ್‍ಯಕ್ರಮ ನಡೆಯಿತು. ಸಭಾ ಕಾರ್‍ಯಕ್ರಮದಲ್ಲಿ ಊರಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪೂಜ್ಯ ಸಾಧ್ವಿಯವರು ಸನ್ಮಾನ ನೆರವೇರಿಸಿದರು. ಕು. ಪ್ರೇರಣಾ ಇವರು ವಂದೇ ಮಾತರಂ ಗೀತೆ ಹಾಡಿದರು. ವರಮಹಾಲಕ್ಷ್ಮಿ ಪೂಜಾ ಸಮಿತಿಯ ಉಪಾಧ್ಯಕ್ಷೆ ಕು ಸವಿತಾ ಮುಂಡೋಳಿಮೂಲೆ ಸ್ವಾಗತಿಸಿದರು. ಸದಸ್ಯರಾದ ಶ್ರೀಮತಿ ದೇವಕಿ ಗುರುವಪ್ಪ ವಂದಿಸಿದರು. ಕು ಸಂಪ್ರೀತಾ ರೈ ಸೂರ್ತಿಲ, ಕು ರಶ್ಮಿ ಜಟ್ಟಿಪಳ್ಳ ಕಾರ್‍ಯಕ್ರಮ ನಿರೂಪಿಸಿದರು.