ಸುಬ್ರಹ್ಮಣ್ಯ ಗ್ರಾ.ಪಂ ನಿಂದ ಅಮೃತ ಮಹೋತ್ಸವ ಸ್ವಾತಂತ್ರ್ಯ ಆಚರಣೆ

0

 

ಆ.13: ಕಡಬ ತಾಲೂಕು ಮಟ್ಟದ ಡಬ್ಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾಟ

ಆ.14: ಏನೆಕಲ್ಲಿನಲ್ಲಿ ಅಮೃತ ಸರೋವರ ಶಂಕುಸ್ಥಾಪನೆ, ಸೈನಿಕ ರಸ್ತೆ ನಾಮಫಲಕ ಅನಾವರಣ, ಐನೆಕಿದು ಸಭಾಭವನ ಉದ್ಘಾಟನೆ

ಆ.15 ರಂದು ಸ್ವಾತಂತ್ರ್ಯೋತ್ಸವ, ಸೈನಿಕರ ಪಥ ಸಂಚಲನ

ಸುಬ್ರಹ್ಮಣ್ಯ ಗ್ರಾ.ಪಂ ನಿಂದ ಸ್ವಾತಂತ್ರ್ಯೋತ್ಸವ ಅವೃುತ ಮಹೋತ್ಸವ ಆಚರಣೆ ನಡೆಯಲಿದ್ದು ನಿರಂತರ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮ ನಡೆಯಲಿದೆ.

ಆ.13.ಬೃಹತ್ ಸ್ವಚ್ಚತಾ ಅಭಿಯಾನ ನಡೆಯಲಿದ್ದು , ಅಮೃತ ಸ್ವಾತಂತ್ರ್ಯೊತ್ಸವ ಕಪ್, ಕಡಬ ತಾಲೂಕು ಮಟ್ಟದ ಡಬ್ಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿದೆ.

ಆ.14 ರಂದು ಏನೆಕಲ್ಲಿನ ಅಂಗಾರವರ್ಮನ ಕೆರೆ ಅಮೃತ ಸರೋವರ ಶಂಕುಸ್ಥಾಪನೆ ನಡೆಯಲಿದೆ , ಬಾನಡ್ಕ ಬೋಳಡ್ಕ ರಸ್ತೆಗೆ ಸೈನಿಕ ರಸ್ತೆ ನಾಮಫಲಕ ಅನಾವರಣ ನಡೆಯಲಿದೆ. ಬಳಿಕ ಐನೆಕಿದುವಿನ ಸಭಾಭವನ ಉದ್ಘಾಟನೆ ನಡೆಯಲಿದೆ.

ಆ.15 ರಂದು ಬೆಳಗ್ಗೆ ಗ್ರಾ.ಪಂ ಬಳಿ ಧ್ವಜಾರೋಹಣ ಬಳಿಕ ನಿವೃತ್ತ ಸೈನಿಕರ ಪಥ ಸಂಚಲನ ನಡೆಯಲಿದ್ದು ಗ್ರಾ.ಪಂ ನಿಂದ ಹೊರಟು, ರಥಬೀದಿವರೆಗೆ ತೆರಳಿ ವಲ್ಲೀಶ ಸಭಾಭವನದವರೆಗೆ ತೆರಳಲಿದೆ. ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ನಿವೃತ್ತ ಸೈನಿಕರಿಗೆ ಸನ್ಮಾನ, ವೀರ ಮರಣ ಹೊಂದಿದ ಯೋಧರ ಮನೆಯವರಿಗೆ ಸನ್ಮಾನ ನಡೆಯಲಿದೆ. ಗ್ರಾ.ಪಂ ನವರು, ಸಂಜೀವಿನಿ ಘಟಕದವರು, ಶಾಲಾ ವಿದ್ಯಾರ್ಥಿಗಳು, ಶಾಲಾ ಅಭಿವೃದ್ಧಿ ಸಮಿತಿ, ಸ್ಥಳೀಯ ಸಂಘ ಸಂಸ್ಥೆಯವರು ಉಪಸ್ಥಿತರಿರುವರು.

LEAVE A REPLY

Please enter your comment!
Please enter your name here