ಅಜ್ಜಾವರದಲ್ಲಿ ಆಟಿ ಉತ್ಸವ

0

 

p>

ಅಜ್ಜಾವರದ ಧನಲಕ್ಷ್ಮೀ ಮಹಿಳಾ ಮಂಡಲದ ಆಶ್ರಯದಲ್ಲಿ ಇತ್ತೀಚೆಗೆ ಆಟಿ ಆಚರಣೆ ಕಾರ್ಯಕ್ರಮ ಜರಗಿತು.

 


ಕಾರ್ಯಕ್ರಮದ ಉದ್ಘಾಟನೆಯನ್ನು ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸತ್ಯವತಿ ಬಸವನಪಾದೆ ರವರು ಚೆನ್ನಮಣೆ
ಆಡುವುದರ ಮೂಲಕ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಧನಲಕ್ಷ್ಮಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶ್ಶ್ಮಿ ಭಟ್ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಧರ್ಮದರ್ಶಿ ಎ ಭಾಸ್ಕರ ರಾವ್ ಬಯಂಬು, ಧನಲಕ್ಷ್ಮಿ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶ್ರೀಮತಿ ಶ್ವೇತಾ ಪುರುಷೋತ್ತಮ, ಸ್ಥಾಪಕಾಧ್ಯಕ್ಷೆ ಶ್ರೀಮತಿ ಜಯಂತಿ ಜನಾರ್ಧನ ರವರು, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ವಿಶಾಲಕ್ಷಿ ಕಲ್ಲಡ್ಕ, ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ ಉಪಸ್ಥಿತರಿದ್ದರು. ಆಟಿ ಆಚರಣೆಯ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗಳಿಗೆ ಊರ ದಾನಿಗಳು ಬಹುಮಾನ ಪ್ರಾಯೋಜಿಸಿದ್ದರು. ಶ್ರೀಮತಿ ವಿಮಲಾ ಅರುಣ ಪಡ್ಡಂಬೈಲು ಅವರು ಸ್ವಾಗತಿಸಿ, ಶ್ರೀಮತಿ ಕವಿತಾ ಪುರುಷೋತ್ತಮ ರವರು ವಂದಿಸಿದರು. ಶ್ರೀಮತಿ ಸೀತಾಲಕ್ಷ್ಮಿ ರವರು ಪ್ರಾರ್ಥಿಸಿದರು ವಿಶಾಲ ಕರ್ಲ ಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಉಪಹಾರಕ್ಕೆ 42 ಆಟಿ ಖಾದ್ಯಗ ಳಿದ್ದವು.

LEAVE A REPLY

Please enter your comment!
Please enter your name here