“ಲಂಚ ಭ್ರಷ್ಟಾಚಾರ ಮುಕ್ತ ಸಮಾಜ” ವಿಷಯದ ಬಗ್ಗೆ ನಡೆದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ಫಲಿತಾಂಶ

0
149

ಸುದ್ದಿ ಸಮೂಹ ಸಂಸ್ಥೆ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ನಡೆದ ಲಂಚ ಭ್ರಷ್ಟಾಚಾರ ಮುಕ್ತ ಸಮಾಜ ವಿಷಯದ ಬಗ್ಗೆ ನಡೆದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಭಾಷಣ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಅನನ್ಯ ಜಯರಾಜ್ ನೀರಬಿದಿರೆ ಪ್ರಥಮ, ದೀಕ್ಷಾ ಹುಕ್ರಾಜೆ ನಂಗಾರು ಮತ್ತು ಸಾಧನ್ ಎಂ.ಡಿ. ದ್ವಿತೀಯ, ಪ್ರೌಢಶಾಲಾ ವಿಭಾಗದಲ್ಲಿ ಬಿಂದು ಕೆ.ಜೆ. ಉಬರಡ್ಕ ಪ್ರಥಮ, ಸಾನ್ವಿ ಪಿ.ಎನ್. ದ್ವಿತೀಯ, ಪದವಿ ಪೂರ್ವ ವಿಭಾಗದಲ್ಲಿ ಸಾಧ್ವಿ ಎಂ.ಡಿ.ಪ್ರಥಮ, ಗೌತಮ್ ಪೇರಾಲು ದ್ವಿತೀಯ ಸ್ಥಾನ ಗಳಿಸಿದ್ದಾರೆ.


ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಸಾನ್ವಿ ಪಿ.ಎನ್. ಪ್ರಥಮ, ಸೃಷ್ಠಿ ಕೆ.ಎಸ್.ದ್ವಿತೀಯ, ಪದವಿಪೂರ್ವ ವಿಭಾಗದಲ್ಲಿ ಸಾಧ್ವಿ ಎಂ.ಡಿ.ಪ್ರಥಮ, ಕೃತಿ ಜಿ.ರಾವ್ ದ್ವಿತೀಯ, ಸಾರ್ವಜನಿಕ ವಿಭಾಗದಲ್ಲಿ ಉಷಾ ಕೆ.ಎಸ್. ಪ್ರಥಮ, ಜಲಜಾಕ್ಷಿ ಕೆ.ಡಿ. ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಬಹುಮಾನ ವಿತರಣೆ ಕಾರ್ಯಕ್ರಮವು ಆ.15 ರಂದು ಸಂಜೆ ರಂಗಮಯೂರಿ ಕಲಾ ಶಾಲೆಯಲ್ಲಿ ನಡೆಯಲಿದೆ.

 

LEAVE A REPLY

Please enter your comment!
Please enter your name here