ಹರ್ ಘರ್ ತಿರಂಗ್ ಯೋಜನೆ ಅಡಿಯಲ್ಲಿ ರೋಟರಿ ಸದಸ್ಯರಿಗೆ ಧ್ವಜ ವಿತರಣೆ

0

 

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆ.15ರಂದು ಮನೆ ಮನೆಗಳಲ್ಲಿ ಧ್ವಜ ಹಾರಿಸಲು ರೋಟರಿ ಸದಸ್ಯರಿಗೆ ರೋಟರಿ ಸಭಾಭವನ ಸುಳ್ಯ ಇಲ್ಲಿ ಧ್ವಜ ಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.


ರೊಟೇರಿಯನ್ ಸವಣೂರು ಸೀತಾರಾಮ ರೈ ಇವರು ಸಾಂಕೇತಿಕವಾಗಿ ರೊಟೇರಿಯನ್ ರಾಮಚಂದ್ರ ಇವರಿಗೆ ಧ್ವಜವನ್ನು ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದ ನಂತರ ಎಲ್ಲಾ ರೊಟರಿ ಸದಸ್ಯರಿಗೆ ರಾಷ್ತ್ರ ದ್ವಜವನ್ನು ವಿತರಿಸಲಾಯಿತು. ಸಭಾ ಅಧ್ಯಕ್ಷತೆಯನ್ನು ರೊಟೇರಿಯನ್ ಚಂದ್ರಶೇಖರ್ ಪೇರಾಲ್ ಇವರು ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಸುಳ್ಯ ಸಿಟಿ ಅಧ್ಯಕ್ಷ ರೋಟೇರಿಯನ್ ಮುರಳಿಧರ ರೈ ಹಾಗೂ ಹಾಗೂ ಇನ್ನರ್ ವ್ಹೀಲ್ ಅಧ್ಯಕ್ಶೆನಯನ ಹರಿಪ್ರಸಾದ್, ಪೂರ್ವ ಅಧ್ಯಕ್ಷ ರೊಟೆರಿಯನ್ ಪ್ರಭಾಕರ್ ನಾಯರ್ ಇವರು ಉಪಸ್ತಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ರೊಟೇರಿಯನ್ ಮಧುರಾ ಎಮ್ ಆರ್ ಇವರು ವಂದಿಸಿದರು.