ಮಂಡೆಕೋಲು: ಗ್ರಂಥಾಲಯ ಸ್ಥಾಪಕರ ದಿನಾಚರಣೆ

0

 

 

ಪುಸ್ತಕ ಓದಿ, ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ : ಗೋಪಿನಾಥ್

ಸುಳ್ಯ:  ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಯಶಸ್ಸು ಗಳಿಸಿದ ಸಾಧಕರ ಆತ್ಮಚರಿತ್ರೆ ಪುಸ್ರಕಗಳನ್ನೂ ಓದಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸರಕಾರಿ ಪ್ರೌಢಶಾಲೆ ಅಜ್ಜಾವರದ ಮುಖ್ಯೋಪಾಧ್ಯಾಯರಾದ ಗೋಪಿನಾಥ್ ಹೇಳಿದರು.

ಅವರು ಶುಕ್ರವಾರ ಮಂಡೆಕೋಲು ಗ್ರಾಮ ಪಂಚಾಯಿತಿ  ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಂಥಾಲಯ ಪಿತಾಮಹ ಎಸ್  ಆರ್ ರಂಗನಾಥ್ ಜನುಮದಿನದ ಪ್ರಯುಕ್ತ ಗ್ರಂಥಾಲಯ ಸ್ಥಾಪಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

 

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸುಳ್ಯ ವಲಯಾಧ್ಯಕ್ಷ ಸುರೇಶ್ ಕಣೆಮರಡ್ಕ ಮಾತನಾಡಿ, ಜ್ಞಾನ ವೃದ್ಧಿಸಲು ಓದು ಸಹಕಾರಿ.  ಮಕ್ಕಳು ಊರ ಗ್ರಂಥಾಲಯದ ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವ ವಿಕಸನಗೊಳಿಸಬೇಕು ಎಂದರು.

ಇದೇ ವೇಳೆ ಓದುಗರ ಬೆಳಕು ಯೋಜನೆಯಡಿಯಲ್ಲಿ ನಡೆದ ಚದುರಂಗ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವೂ ನಡೆಯಿತು.ಚದುರಂಗ ಸ್ಪರ್ಧೆಯ ಪ್ರಥಮ ಬಹುಮಾನ ಪ್ರಖ್ಯಾತ್ ಗಣೇಶ್ ಮಾವಂಜಿ,ದ್ವಿತೀಯ ಪ್ರಣವ್ ಪ್ರಕಾಶ್ ಹಾಗೂ ತೃತೀಯ ಬಹುಮಾನವನ್ನು ಪ್ರಜಿಶ್ ಸುರೇಶ್ ಕಣೆಮರಡ್ಕ ಪಡಕೊಂಡರು. ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ನವೋದಯ ಒಕ್ಕೂಟದ ಪ್ರೇರಕಿ ಸಂಧ್ಯಾರವರು ಗ್ರಂಥಾಲಯಕ್ಕೆ ಗೋಡೆ ಗಡಿಯಾರ ಕೊಡುಗೆಯಾಗಿ ನೀಡಿದರು.

ಮಂಡೆಕೋಲು ಗ್ರಾ.ಪಂ‌ ಅಧ್ಯಕ್ಷೆ ವಿನುತಾ ಪಾತಿಕಲ್ಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ‌ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ,  ಸಂಜೀವಿನಿ ಸಂಘದ ತಾಲೂಕು  ವ್ಯವಸ್ಥಾಪಕಿ ಶ್ವೇತಾ, ತಾಲೂಕು ಶಿಶು ಅಭಿವೃದ್ದಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಶೈಲಜಾ, ಗ್ರಾ.ಪಂ ಉಪಾಧ್ಯಕ್ಷ  ಸದಸ್ಯ ಬಾಲಚಂದ್ರ ದೇವರಗುಂಡ,ಉಷಾ ಗಂಗಾಧರ್, ದಿವ್ಯಲತಾ ಚೌಟಾಜೆ, ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ಕೆ ಸ್ವಾಗತಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸಂಧ್ಯಾ ಮಂಡೆಕೋಲು ಪ್ರಾರ್ಥಿಸಿದರು. ಯಶಸ್ವಿ ನಾಗರಿಕ ಸೇವಾ ಟ್ರಸ್ಟ್ ನ ಸಂಚಾಲಕ ಮುರಳೀಧರ್ ಕಾರ್ಯಕ್ರಮ ನಿರೂಪಿಸಿದರು.

—-