ಸುಳ್ಯ ಇನ್ನರ್ ವಿಲ್ ಕ್ಲಬ್ ಪದಗ್ರಹಣ ಸಮಾರಂಭ

0

ಸುಳ್ಯದ ಇನ್ನರ್ ವಿಲ್ ಕ್ಲಬ್ ನ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ನಯನಾ ಹರಿಪ್ರಸಾದ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸವಿತಾ ನಾರ್ಕೋಡು ಹಾಗೂ ಕೋಶಾಧಿಕಾರಿ ಶ್ರೀಮತಿ ಚೈತನ್ಯ ಸುಬ್ರಹ್ಮಣ್ಯ ತಂಡದ ಪದಗ್ರಹಣ ಸಮಾರಂಭವು ಇತ್ತೀಚೆಗೆ ಸುಳ್ಯದ ರೋಟರಿ ಕಮ್ಯೂನಿಟಿ ಸಭಾಂಗಣದಲ್ಲಿ ನಡೆಯಿತು.

ಕ್ಲಬ್‌ನ ಪೂರ್ವಾಧ್ಯಕ್ಷರಾದ ಶ್ರೀಮತಿ ಸುಮಂಗಲಾ ರವಿರಾಜ್ ಪದಗ್ರಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಮತಿ ಮೌಲ್ಯ ಬಾಲಾಡಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದರು.
ಆರೋಗ್ಯ ಸಿರಿಗೆ ಚಾಲನೆ : ಸಮಾರಂಭದಲ್ಲಿ ಆರೋಗ್ಯ ಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಕಾಳಿನ ಸ್ವಾದೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದ ಲಿಂಗಪ್ಪ ಮಡಿವಾಳರ ಕುಟುಂಬಕ್ಕೆ ಧನಸಹಾಯ ಮಾಡಲಾಯಿತು.

ವಿದ್ಯಾಸಿರಿ ಯೋಜನೆ : ತಂದೆ-ತಾಯಿ ಇಲ್ಲದ ವಿದ್ಯಾರ್ಥಿಯೊಬ್ಬನ ವಿದ್ಯಾಭ್ಯಾಸಕ್ಕೆ ನೆರವು ಹಸ್ತಾಂತರ ನಡೆಯಿತು. ಶ್ರೀಮತಿ ಶೀತ ಕೇಶವ್ ಹಾಗೂ ಶ್ರೀಮತಿ ಬಿಂದು ಕುಯ್ಯಮುಡಿ ಕಾರ್ಯಕ್ರಮ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here