ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

 

ಸುಳ್ಯದ ಪ್ರತಿಷ್ಟಿತ ವಿದ್ಯಾ ಸಂಸ್ಥೆ ಗ್ರೀನ್ ವ್ಯೂ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸಂಸ್ಥೆಯ ಅದ್ಯಕ್ಷರಾದ ಕೆ.ಎಮ್ ಮಜೀದ್ ಜನತಾ ದ್ವಜಾರೋಹಣ ನೆರವೇರಿಸಿದರು.


ವಿದ್ಯಾರ್ಥಿಗಳ ಆಕರ್ಷಕ ಮಾರ್ಚ್ ಪಾಸ್ಟ್ ಮೂಲಕ ರಾಷ್ಟ್ರ ದ್ವಜಕ್ಕೆ ವಂದನೆ ಸಲ್ಲಿಸಲಾಯಿತು.
ಶಾಲೆಯ ಶಿಕ್ಷಕಿ ಉಷಾ ಸ್ವಾಗತ ಕೋರಿದರು .ಸಂಚಾಲಕರಾದ ಮೊಯಿದೀನ್ ಸರ್ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯೋಪಾದ್ಯಾಯರಾದ ಎಮ್.ಎಸ್.ಅಬ್ದುಲ್ ರಹೀಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಸ್ಥೆಯ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಶುಭ ಹಾರೈಸಿದರು.ದಕ.ಜಿಲ್ಲಾ ಮುಸ್ಲಿಮ್ ಶಿಕ್ಷಣ ಸಂಸ್ಥೆ ಒಕ್ಕೂಟ ದ ಜಿಲ್ಲಾ ಉಪಾದ್ಯಕ್ಷರಾದ ಮುಸ್ತಫಾ ಜನತಾ ಸಂದೇಶ ಭಾಷಣ ಮಾಡಿದರು.ಸಂಸ್ಥೆಯ ಡೈರಕ್ಟರ್ ಶಾಫಿ ಕುಡ್ತಮೊಟ್ಟೆ ಶುಭಾಶಯ ಕೋರಿದರು.ಸಂಸ್ಥೆಯ ಡೈರೆಕ್ಟರುಗಳಾದ ಎಸ್.ಎಮ್ ಹಮೀದ್,ಅದಮ್ ಹಾಜಿ ಕಮ್ಮಾಡಿ,ಉಬೈದುಲ್ಲಾ ಕಟ್ಟೆಕಾರ್ಸ್, ಹಾಜಿ ರಿಜ್ವಾನ್ ನಗರ ಪಚಾಯತ್ ಸದಸ್ಯರಾದ ಉಮರ್ ಕೆ.ಎಸ್,ಮಾಜಿ ಅದ್ಯಕ್ಷರಾದ ಐ ಇಸ್ಮಾಯಿಲ್,ಅನ್ಸಾರಿಯಾ ಡೈರೆಕ್ಟರ್ ಗಳಾದ ಎಸ್.ಪಿ ಹಮೀದ್ ,ಎಸ್,ಪಿ,ಅಬೂಬಕ್ಕರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆಕರ್ಷಕ ವಿದ್ಯಾರ್ಥಿಗಳ ಸಾಂಸ್ಕತಿಕ ಕಾರ್ಯಕ್ರಮ ದೊಂದಿಗೆ ಕಾರ್ಯಕ್ರಮ ರಂಗೇರಿತ್ತು.ವಿದ್ಯಾರ್ಥಿನಿಗಳಾದ ಆಯಿಷಾ ಟಿ.ಎಮ್, ಆಯಿಷತ್ ಜುಮಾನ,ಮತ್ತು ಜಮಿಲತ್ ರಫಾ ಕಾರ್ಕ್ರಮ ನಿರೂಪಿಸಿದರು.ಶಿಕ್ಷಕಿ ಫಾತಿಮ ವಂದಿಸಿದರು.