ಬಿ ಎಂ ಎಸ್ ಆಟೋ ರಿಕ್ಷಾ ಚಾಲಕರ ಸಂಘದಿಂದ 75ನೇ ಸ್ವಾತಂತ್ರೋತ್ಸವ

0

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿ ಎಂ ಎಸ್ ಸಂಯೋಜಿತ ಇದರ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮ ಆ.15 ರಂದು ಬೆಳಿಗ್ಗೆ 7 ಘಂಟೆಗೆ ಸರಿಯಾಗಿ ಬಸ್ ನಿಲ್ದಾಣದ ರಿಕ್ಷಾ ಪಾರ್ಕಿಂಗ್ ನಲ್ಲಿ ನಡೆಯಿತು. ಕಾರ್ಯಕ್ರಮದ ದ್ವಜಾರಹಣವನ್ನು ನಮ್ಮ ದೇಶದ ಮಾಜಿ ಸೈನಿಕರು ಆದ ಚಂದ್ರಹಾಸ ಕಡ್ಯದ ನೆರವೇರಿಸಿ ಭಾಷಣ ಮಾಡಿದರು.


ಅಧ್ಯಕ್ಷರಾಗಿ ರಾಧಾಕೃಷ್ಣ ಬೈತಡ್ಕ ,
ಮುಖ್ಯ ಅತಿಥಗಳಾಗಿ ಬಿ ಯಂ ಯಸ್ ರಿಕ್ಷಾ ಚಾಲಕ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ಸುಳ್ಯ ಇದರ ಅಧ್ಯಕ್ಷ ಪಿ ಗೋಪಾಲಕೃಷ್ಣ ಭಟ್,
ಜಿಲ್ಲಾ ಅಧ್ಯಕ್ಷರು ಭಾರತೀಯ ಮಜ್ದೂರ್ ಸೇವಾ ಸಂಘ ದ.ಕ  ಜಿಲ್ಲೆ ಹಾಗೂ ವಕೀಲರು ಭಾಸ್ಕರ್ ರಾವ್ ಉಪಸ್ಥಿತರಿದ್ದ ರು. ರಾಧಾಕೃಷ್ಣ ಉಬರಡ್ಕ ಸ್ವಾಗತಿಸಿ, ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.
ದ್ವಜ ಗೀತೆಯನ್ನು ನಾಗರಾಜ್ ಮುಳ್ಯ ಹಾಡಿದರು.
ಚಂದ್ರಶೇಖರ್ ಮರ್ಕಂಜ ಧನ್ಯವಾದ ಸಲ್ಲಿಸಿ, ಎಲ್ಲರಿಗೂ ಸಿಹಿ ತಿಂಡಿ ಹಾಗೂ ಮಾಲ್ಟನ್ನು ವಿತರಿಸಲಾಯಿತು.
ಸಿಹಿ ತಿಂಡಿಯನ್ನು ಕೃಷ್ಣಪ್ರಸಾದ್ ಕಲ್ಕಿ ಮೊಬೈಲ್ ಅಂಗಡಿಯವರು ಮತ್ತು ಮಾಲ್ಟನ್ನು ವೆಂಕಟೇಶ್ ಭಟ್ ಅವರು ಕೊಟ್ಟು ಸಹಕರಿಸಿದರು.