ಪೂದೆ ಅಮೃತ ಸರೋವರದ ದಂಡೆಯ ಮೇಲೆ ಸ್ವಾತಂತ್ರ್ಯೋತ್ಸವ

0
94

 

ಸ್ವಾತಂತ್ರ್ಯದ‌ ಅಮೃತ ಮಹೋತ್ಸವದ‌ ಅಂಗವಾಗಿ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೂದೆ ಅಮೃತ ಸರೋವರದ ದಂಡೆಯ ಮೇಲೆ ನಿವೃತ ಸೈನಿಕರಾದ‌ ಸುಂದರ ಗೌಡ ಪಿಲಂಕುಜೆಯವರು ಧ್ವಜಾರೋಹಣ ಮಾಡಿದರು.

ಸುಳ್ಯ ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯವರು ೭೫ನೇ ಸ್ವಾತಂತ್ರ್ಯೋವದ ಸವಿನೆನಪಿಗಾಗಿ ೭೫ ಹಣ್ಞಿನ ಸಸಿ ವಿತರಣೆ ಹಾಗೂ ನಾಮ ಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.

೭೫ನೇ ಸ್ವಾತಂತ್ರ್ಯೋವದ ಸವಿನೆನಪಿಗಾಗಿ ಮಾಜಿ ಸೈನಿಕರಾದ ಮೋಹನ್ ದಾಸ್ ಇದುಂಗುಳಿರವರು ಸಸಿ ನೆಡುವ ಕಾಮಗಾರಿಗೆ ಚಾಲನೆ ನೀಡಿದರು.


ಸುಳ್ಯ ತಾಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ತಾಂತ್ರಿಕ ಸಂಯೋಜಕರು( ಸಿವಿಲ್, ಕೃಷಿ), ತಾಲೂಕು ಐಇಸಿ ಸಂಯೋಜಕರು, ಸಂಜೀವಿನಿ ಒಕ್ಕೂಟದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು, ಗ್ರಾ.ಪಂ ಸಿಬ್ಬಂದಿಗಳ‌ ಉಪಸ್ಥಿತರಿದ್ದರು.

ಮಾಜಿ ಸೈನಿಕರಿಗೆ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಸನ್ಮಾನ ನಡೆಯಿತು. ಕೆರೆ ಹೂಳೆತ್ತುವ ತಂಡದ ಸದಸ್ಯರಿಗೆ ಸ್ಮರಣಿಕೆ ನೀಡಲಾಯಿತು.
ಎನ್ ಆರ್ ಎಲ್ ಎಮ್ ಒಕ್ಕೂಟದ ಸದಸ್ಯೆಯರಿಂದ ದೇಶಭಕ್ತಿಗೀತೆ ನಡೆಯಿತು.

 

 

LEAVE A REPLY

Please enter your comment!
Please enter your name here