ಆ.19 ರಂದು‌ ಪಂಜದಲ್ಲಿ ಭಜನೋತ್ಸವ

0

 

 

ನಗರ ಭಜನೆಯ ಮೂಲಕ ಆಮಂತ್ರಣ ಪತ್ರಿಕೆ

ಶ್ರೀ ಶಾರದಾಂಬಾ ಭಜನಾ ಮಂಡಳಿಯ ಪಂಜ,ಭಜನೋತ್ಸವ ಸಮಿತಿ ಇದರ ಆಶ್ರಯದಲ್ಲಿ ಆ.19 ರಂದು ಭಜನೋತ್ಸವ 2022 ಅರ್ಧ ಏಕಹ ಭಜನಾ ಕಾರ್ಯಕ್ರಮ ಸೂರ್ಯೋದಯದಿಂದ ಸೂರ್ಯಾಸ್ತಮಾನ ದವರೆಗೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಲಿದೆ.

ಇದರ ಆಮಂತ್ರಣ ಪತ್ರಿಕೆ ವಿತರಣೆಯು ನಗರ ಭಜನೆಯೊಂದಿಗೆ ಆ.16 ರಂದು ಸಂಜೆ ಜರುಗಿತು.ಆ.19 ರಂದು ಮುಂಜಾನೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಜನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಜಾಕೆ ಸಭಾಧ್ಯಕ್ಷತೆ ವಹಿಸಲಿದ್ದಾರೆ.ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ,ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅತಿಥಿಗಳಾಗಿ ಭಾಗವಿಸಲಿದ್ದಾರೆ. ಎಂದು ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ