ಸುಳ್ಯ  ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಲಾಂಛನ ಬಿಡುಗಡೆ ಮತ್ತು ಪೂರ್ವಭಾವಿ ಸಭೆ

0

 

ಶಾರದಾಂಬೋತ್ಸವವು ಇನ್ನೊಂದು ತಿಂಗಳಲ್ಲಿ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಶ್ರೀ ಚೆನ್ನಕೇಶವ ದೇವಾಲಯದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಚಿದಾನಂದ ವಿದ್ಯಾನಗರ ಅವರ ಅಧ್ಯಕ್ಷತೆಯಲ್ಲಿ, ಗೌರವಾಧ್ಯಕ್ಷ ಗೋಕುಲ್ ದಾಸ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ವೇದಿಕೆಯಲ್ಲಿ ರಾಧಾಕೃಷ್ಣ ರೈ ಬೂಡು, ಪ್ರದೀಪ್ ಕೆ. ಎನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಗ್ಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಚಿದಾನಂದ ವಿದ್ಯಾನಗರ ಮತ್ತು ಗೋಕುಲ್ ದಾಸ್ ಅವರು ಸಭೆಗೆ ವಿವರಿಸಿದರು, ಅಲ್ಲದೆ ಗೌರವ ಸಲಹೆಗಾರರಾಗಿ ಡಾ. ಲೀಲಾಧರ್ ಹಾಗೂ ಹರೀಶ್ ಉಬರಡ್ಕರವರು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಎಂ. ಕೆ ಸತೀಶ್, ಕೃಷ್ಣ ಬೆಟ್ಟ, ಜನಾರ್ಧನ ದೋಳ, ಪುರುಷೋತ್ತಮ, ರಾಜೇಶ್ ಕುರುಂಜಿಗುಡ್ಡೆ, ಮಂಜುನಾಥ್ ಬಳ್ಳಾರಿ, ಕುಸುಮಾಧರ ರೈ ಬೂಡು, ಉದಯಕುಮಾರ್, ರಾಜು ಪಂಡಿತ್, ರವಿ ಪೈಚಾರ್, ಕಿರಣ ಉಪಸ್ಥಿತರಿದ್ದರು. ಕಾರ್ಯದರ್ಶಿ ರವಿಚಂದ್ರ ಕೊಡಿಯಲಬೈಲು ಎಲ್ಲರನ್ನು ಸ್ವಾಗತಿಸಿ, ರಾಧಾಕೃಷ್ಣ ರೈ ಬೂಡು ಎಲ್ಲರನ್ನು ವಂದಿಸಿದರು, ಅಲ್ಲದೆ 50 ವರ್ಷದ ಸುವರ್ಣಮಹೋತ್ಸವದ ಸವಿ ನೆನಪಿಗಾಗಿ ಡಾ. ಲೀಲಾಧರ್ ಡಿ. ವಿ ಮತ್ತು ಹರೀಶ್ ಉಬರಡ್ಕ ಲಾಂಛನ ಬಿಡುಗಡೆಗೊಳಿಸಿದರು.

LEAVE A REPLY

Please enter your comment!
Please enter your name here