ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ಕೇಂದ್ರ ಆರಂಭ

0

 

2022-23  ನೇ ಸಾಲಿನ ಪ್ರಥಮ ವರ್ಷದ ಬಿ.ಇ. (ಇಂಜಿನಿಯರಿಂಗ್) ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು  ದಿನಾಂಕ ೨೨-೦೮-೨೦೨೨ ರಿಂದ ದಾಖಲೆ ಪರಿಶೀಲನೆ ಏರ್ಪಡಿಸಿದೆ. ಅದರಂತೆ ದಾಖಲಾತಿ ಪರಿಶೀಲನಾ ಕಾರ್ಯವು ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಡಾ. ರೇಣುಕಾ ಪ್ರಸಾದ್ ಕೆ.ವಿ., ಪ್ರಧಾನ ಕಾರ್ಯದರ್ಶಿಗಳು ಎಒಎಲ್‌ಇ(ರಿ) ಇವರ ಮಾರ್ಗದರ್ಶನದ ಮೇರೆಗೆ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ Option entry ಮಾಡಲು ಮತ್ತು ಆಯ್ಕೆಗಳನ್ನು ನಮೂದಿಸಲು ಉಚಿತ ಸೌಲಭ್ಯ ಹಾಗೂ ಬೇಕಾದ ಎಲ್ಲಾ ಸಲಹೆಗಳನ್ನು ಮತ್ತು ಸೂಚನೆಗಳನ್ನು ನೀಡಲಾಗುವುದು. ಆಸಕ್ತರು ಇದರ ಪ್ರಯೋಜನ ಪಡೆಯಬಹುದು ಎಂದು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ   ಡಾ. ಉಜ್ವಲ್ ಯು.ಜೆ. ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.