ಆಲೆಟ್ಟಿಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ

0

 

ಆಲೆಟ್ಟಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗ್ರಾಮದ ವಿವಿಧ ಸಂಘಗಳ ಹಾಗೂ ಕಾರ್ಕಳ ಯಶಸ್ವಿ ನಾಗರಿಕ ಸೇವಾ ಸಂಘ ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ ಆ.28 ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ದೀಪ ಬೆಳಗಿಸಿದರು. ಡಾ.ಅವಿನಾಶ್, ಪಂ.ಸದಸ್ಯರಾದ ಕಮಲ ನಾಗಪಟ್ಟಣ, ಮೀನಾಕ್ಷಿ ಕುಡೆಕಲ್ಲು, ಅನಿತಾ ಅರಂಬೂರು, ವೀಣಾ ಆಲೆಟ್ಟಿ, ‌ವೇದಾವತಿ ನೆಡ್ಚಿಲು, ಪಿ.ಡಿ.ಒ ಕೀರ್ತಿ ಪ್ರಸಾದ್, ಶಿಬಿರದ ನಿರ್ದೇಶಕ ಮುರಳೀಧರ ಸಿ.ಹೆಚ್, ಪ್ರಸಾದ್ ನೇತ್ರಾಲಯದ ನಿಶ್ಚಿತ್ ಶೆಟ್ಟಿ, ಧ.ಗ್ರಾ.ಯೋ.ಮೇಲ್ವಿಚಾರಕಿ ಹೇಮಲತಾ, ಸಂಘಟಕ ಶಿವಪ್ರಸಾದ್ ಆಲೆಟ್ಟಿ, ಪಂ.ಸಿಬ್ಬಂದಿ ರವಿಕುಮಾರ್ ಬಾರ್ಪಣೆ ಉಪಸ್ಥಿತರಿದ್ದರು.


ಬೆಳಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ 1.00 ರ ತನಕ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು. ಪ್ರಸಾದ್ ನೇತ್ರಾಲಯದ ತಜ್ಞ ವೈದ್ಯರಿಂದ ಪರೀಕ್ಷಿಸಲಾಯಿತು. ಬೆಳಗ್ಗೆ ಸಾರ್ವಜನಿಕ ನಾಗರಿಕರು ಆಗಮಿಸಿ ನೋಂದಾವಣೆಯಲ್ಲಿ ತೊಡಗಿಸಿಕೊಂಡರು. ಆರೋಗ್ಯ ಇಲಾಖೆಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಪಂ.ಸಿಬ್ಬಂದಿ ವರ್ಗದವರು ಸಹಕರಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತ ಆಯುಷ್ಮಾನ್ ನೋಂದಾವಣೆ ಮಾಡಲಾಯಿತು.