ಮೂಡೆಕಲ್ಲು ಮನೆಯಲ್ಲಿ 8ನೇ ವರ್ಷದ ಗಣೇಶೋತ್ಸವ

0

ದುಗ್ಗಲಡ್ಕದ ಮೂಡೆಕಲ್ಲು ಸೋಮಪ್ಪ ಪೂಜಾರಿಯವರ ಮನೆಯಲ್ಲಿ 8ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಸೆ.1ರಂದು ಆಚರಿಸಲಾಯಿತು.


ಸೋಮಪ್ಪ ಪೂಜಾರಿಯವರ ಮೊಮ್ಮಗ ಯುವ ಕಲಾವಿದ ಅಮೃತ್ ಸಾಲಿಯಾನ್ ಸ್ವತಃ ಮನೆಯಲ್ಲಿಯೇ ರಚಿಸಿದ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಿ,ಪೂಜೆ ಮಾಡಲಾಯಿತು.
ಸಂಜೆ ಪ್ರತಿಷ್ಠೆ, ದುಗ್ಗಲಡ್ಕದ ಅಯ್ಯಪ್ಪ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆದು,ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು. ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ಸುಂದರ ರಾವ್ ಪೂಜಾ ಕಾರ್ಯ ನಡೆಸಿದರು.


ಈ ಸಂದರ್ಭದಲ್ಲಿ ಮನೆಯವರಾದ ಸೋಮಪ್ಪ ಪೂಜಾರಿ, ಶಿವಾನಂದ ಸಾಲಿಯಾನ್, ದಯಾನಂದ ಸಾಲಿಯಾನ್ ಮತ್ತು ಮನೆಯವರು,ಬಂಧು ಮಿತ್ರರು,ಊರವರು ಭಾಗವಹಿಸಿದರು.