ಬೆಳ್ಳಾರೆಯಲ್ಲಿ 51 ನೇ ವರ್ಷದ ಶ್ರೀ ಗಣೇಶೋತ್ಸವ

0

 

ವಿಜೃಂಭಣೆಯಿಂದ ನಡೆದ ಶೋಭಾಯಾತ್ರೆ

ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ, ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ 51 ನೇ ವರ್ಷದ ಶ್ರೀ ಗಣೇಶೋತ್ಸವವು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಕ್ತಿ ,ಸಂಭ್ರಮದಿಂದ ನಡೆಯಿತು.
ಸೆ.1 ರಂದು ಸಂಜೆ ಶ್ರೀ ದೇವರಿಗೆ ಮಹಾಪೂಜೆ,ಮಂಗಳಾರತಿ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಿತು.

ನಂತರ ಶ್ರೀ ದೇವರ ವಿಜೃಂಭಣೆಯ ಶೋಭಾಯಾತ್ರೆಯು ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ನಡೆಯಿತು.
ಶೋಭಾಯಾತ್ರೆಯಲ್ಲಿ ಫ್ರೆಂಡ್ಸ್ ಟೈಗರ್ ಬೆಳ್ಳಾರೆ ಯ ಹುಲಿವೇಷದ ಕುಣಿತ ತಂಡ, ಶಿಲ್ಪಾ ಗೊಂಬೆ ಬಳಗ ಕಲ್ಲಡ್ಕ, ಕುಣಿತ ಭಜನೆ, ಸಿಡಿಮದ್ದು ಪ್ರದರ್ಶನ, ಬ್ಯಾಂಡ್ ವಾದ್ಯದ ಅಬ್ಬರ,ವಿವಿಧ ವೇಷಭೂಷಣಗಳ ಕುಣಿತದೊಂದಿಗೆ ವೈಭವದ ಶೋಭಾಯಾತ್ರೆ ನಡೆದು ಜಲಸ್ತಂಭನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿರಾಟ್ ಫ್ರೆಂಡ್ಸ್ ನ ಗೌರವಾಧ್ಯಕ್ಷ ಮಿಥುನ್ ಶೆಣೈ, ಅಧ್ಯಕ್ಷ ಮನೋಜ್ ಶೆಟ್ಟಿ, ಕಾರ್ಯದರ್ಶಿ ಧೀರಜ್, ಕೋಶಾಧಿಕಾರಿ ಪ್ರದೀಪ್ ಕಲ್ಲೋಣಿ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.