ಸುಳ್ಯ ಸ. ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ನೂತನ ಎಸ್ ಡಿ ಎಂ ಸಿ ಪದಾಧಿಕಾರಿಗಳ ಆಯ್ಕೆ

0
208

 

p>

ಅಧ್ಯಕ್ಷರಾಗಿ ರಾಜೇಶ್ವರಿ ಕಾಡುತೋಟ ನೇಮಕ

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಗೆ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪ್ರಥಮ ಸಭೆ ಇಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಶಾಸಕರ ಸೂಚನೆಯಂತೆ ಎಸ್ ಡಿ ಎಂ ಸಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀಮತಿ ರಾಜೇಶ್ವರಿ ಕಾಡುತೋಟ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಿತಿಯ ನೂತನ ಸಾಲಿನ ಸದಸ್ಯರಾಗಿ ನೇಮಕಗೊಂಡಿರುವ ಪ್ರವೀಣ್ ರಾವ್ ರೆಂಜಾಳ, ಜಯರಾಮ ಕೆ ಕೆ, ಪುಟ್ಟಣ್ಣ ವಲಿಕಜೆ, ಹಸೈನಾರ್ ಜಯನಗರ, ಶ್ರೀಮತಿ ಲತಾ ಎಂ ರೈ, ಶ್ರೀಮತಿ ರೇಖಾ, ರಾಜೇಶ್ ಎನ್. ಸಭೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಮಾಡಬೇಕಾದ ಶಾಲಾ ಅಭಿವೃದ್ಧಿಯ ಕುರಿತು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಕುರಿತು ಚರ್ಚೆಗಳು ನಡೆಯಿತು. ಶಿಕ್ಷಕಿ ಪೂರ್ಣಿಮಾ ಸಹಕರಿಸಿ ವಂದಿಸಿದರು.
ಈ ಸಂದರ್ಭದಲ್ಲಿ ನೂತನ ಸಮಿತಿಯ ಅಧ್ಯಕ್ಷೆ ಮತ್ತು ಸದಸ್ಯರುಗಳನ್ನು ಶಾಲಾ ಶಿಕ್ಷಕರಿಗೆ ಪರಿಚಯಿಸುವ ಕಾರ್ಯ ನಡೆಯಿತು.
ಸುಳ್ಯ ಶಾಸಕ ಎಸ್ ಅಂಗಾರರವರ ಶಿಫಾರಸಿನಂತೆ ನೂತನ ಸಮಿತಿ ರಚಿಸಲಾಗಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here