ಸೆ.10 ರಂದು ಸುಳ್ಯ ರೈತ ಉತ್ಪಾದಕ ಕಂಪೆನಿಯ ಮಹಾಸಭೆ ಷೇರು ಪ್ರಮಾಣ ಪತ್ರ ವಿತರಣೆ – ಪಿಎಂಎಫ್‌ಎಂಇ ಉದ್ಯಮ ಕುರಿತು ಮಾಹಿತಿ

0

ಸೆ.10 ರಂದು ಸುಳ್ಯ ರೈತ ಉತ್ಪಾದಕ ಕಂಪೆನಿಯ ಮಹಾಸಭೆ
ಷೇರು ಪ್ರಮಾಣ ಪತ್ರ ವಿತರಣೆ – ಪಿಎಂಎಫ್‌ಎಂಇ ಉದ್ಯಮ ಕುರಿತು ಮಾಹಿತ

ಕೇಂದ್ರ ಮತ್ತು ರಾಜ್ಯ ಸರಕಾರದ ನೆರವಿನೊಂದಿಗೆ ಕೃಷಿ ಇಲಾಖೆ ತೋಟಗಾರಿಕೆ ಮತ್ತು ಅಟಲ್ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ ಇದರ ಸಹಕಾರದಲ್ಲಿ ಆರಂಭಗೊಂಡ ಸುಳ್ಯ ರೈತ ಉತ್ಪಾದಕ ಕಂಪೆನಿ ನಿಯಮಿತ ಇದರ ವಾರ್ಷಿಕ ಮಹಾಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಸೆ.೧೦ರಂದು ಸುಳ್ಯ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆಯಲಿದೆ.
ಸಭೆಯಲ್ಲಿ ಎಸ್.ಅಂಗಾರ, ಮಾನ್ಯ ಸಚಿವರು ಮೀನುಗಾರಿಕೆ ಬಂದರು ಮತ್ತು ಒಳನಾಡು ಜನಸಾರಿಗೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೃಷಿ ಇಲಾಖೆಯಯ ಜಂಟಿ ನಿರ್ದೇಶಕಿ ಶ್ರೀಮತಿ ಸೀತಾ ಎ, ಅಟಲ್ ಇನ್ಕ್ಯೂಬೇಷನ್ ಸೆಂಟರ್ ನಿಟ್ಟೆ ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಪಿ. ಆಚಾರ್, ಸುಳ್ಯ ಹಿರಿಯ ತೋಟಗಾರಿಕಾ ಸಹಾಯ ನಿರ್ದೇಶಕಿ ಶ್ರೀಮತಿ ಸುಹಾನ ರವರು ಸಭೆಯಲ್ಲಿ ಉಪಸ್ಥಿತರಿರುವರು.
ಸಮಾರಂಭದಲ್ಲಿ ತೋಟಗಾರಿಕೆ ಇಲಾಖೆಯ ಸಹ ಯೋಗದೊಂದಿಗೆ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮದ ಮಾಹಿತಿ ಕಾರ್ಯಕ್ರಮ ನಡೆಯುವುದು. ಸಂಪನ್ಮೂಲ ವ್ಯಕ್ತಿಯಾಗಿ ಪಿಎಂಎಫ್‌ಎಂಇ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ| ಫಝಲ್ ಭಾಗವಹಿಸಲಿದ್ದಾರೆ. ಹಾಗೂ ದೇಶಿ – ವಿದೇಶಿ ತಳಿಯ ವಿವಿಧ ಹಣ್ಣಿನ ಗಿಡಗಳ ಬಗ್ಗೆ ಅನಿಲ್ ಬಳಂಜ ಮಾಹಿತಿ ನೀಡುವರು. ಹಾಗೂ ಹಣ್ಣಿನ ಗಿಡಗಳ ಖರೀದಿಗೂ ಅವಕಾಶವಿರುತ್ತದೆ.
ಎಲ್ಲ ಷೇರುದಾರರಿಗೆ ಷೇರು ಪ್ರಮಾಣ ಪತ್ರ ವಿತರಣೆ ಮಾಡಲಿದ್ದು ಎಲ್ಲಾ ಷೇರುದಾರರು ಭಾಗವಹಿಸಬೇಕೆಂದು ಸಂಘದ ಅಧ್ಯಕ್ಷರಾದ ವೀರಪ್ಪ ಗೌಡ ಕಣ್ಕಲ್ ತಿಳಿಸಿದ್ದಾರೆ.