ಸುಳ್ಯ: ಲ್ಯಾಂಪ್ ಸೊಸೈಟಿ ಮಹಾಸಭೆ

0

 

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ. 4ರಂದು ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕರವರ ಅಧ್ಯಕ್ಷತೆಯಲ್ಲಿ ಸುಳ್ಯ ಅಂಬಟೆಡ್ಕದಲ್ಲಿರುವ ಮರಾಟಿ ಸಮಾಜ ಸೇವಾ ಮಂದಿರ ಗಿರಿದರ್ಶಿನಿಯಲ್ಲಿ ನಡೆಯಿತು.


ಸಂಘದ ಉಪಾಧ್ಯಕ್ಷ ಬಿ. ಕುಂಞಣ್ಣ ನಾಯ್ಕ ಬಾಳೆಗುಡ್ಡೆ ಕಳಂಜ, ನಿರ್ದೇಶಕರಾದ ಶ್ರೀಮತಿ ರೇವತಿ ಪಿ. ಅಜ್ಜಾವರ, ಎಂ. ವಿಠಲ ನಾಯ್ಕ ಎಡಮಂಗಲ, ಬಿ. ಸುಬ್ಬಣ್ಣ ನಾಯ್ಕ ಗುತ್ತಿಗಾರು, ಮಾಧವ ಡಿ. ಸುಬ್ರಹ್ಮಣ್ಯ, ಶ್ರೀಮತಿ ನೀಲಮ್ಮ ಕೆ ಅಮರಪಡ್ನೂರು, ಶ್ರೀಮತಿ ಕುಸುಮ ಸಿ. ನೆಲ್ಲೂರುಕೆಮ್ರಾಜೆ, ಶ್ರೀಮತಿ ವಿಮಲಾಕ್ಷಿ ಟಿ ಆಲೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಚಂದ್ರಶೇಖರ ಡಿ. ಸ್ವಾಗತಿಸಿ ವರದಿ ವಾಚಿಸಿದರು. ರಘುನಾಥ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು ಸಭೆಯಲ್ಲಿ ಹಾಜರಿದ್ದು, ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.