ಗುತ್ತಿಗಾರು: ಒಂದು ದಿನ ಒಂದು ಕಥೆ ಅಭಿಯಾನ ಕಾರ್ಯಕ್ರಮ

0

ಸರ್ಕಾರದ ನಿರ್ದೇಶನದಂತೆ ಗುತ್ತಿಗಾರು ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಪ್ರಥಮ್ ಬುಕ್ಸ್ ಸಂಸ್ಥೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದೊಂದಿಗೆ ಸ.1 ರಿಂದ ಸೆ. 10 ನೇ ರವರೆಗೆ ” ಒಂದು ದಿನ ಒಂದು ಕಥೆ ” ಅಭಿಯಾನ ಕಾರ್ಯಕ್ರಮಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ‌ ಶ ಧನಪತಿ ಬಿ ಇವರು ಇಂದು ಚಾಲನೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ವಟರ್ ಮತ್ತು ಸುಂದರಿ ಕಾಣೆಯಾಗಿದ್ದಾಳೆ ಎಂಬ ಎರಡು ಕಥೆಗಳನ್ನು ಪಂಚಾಯತ್ ವ್ಯಾಪ್ತಿಯ ಮಕ್ಕಳಿಗೆ ಮೇಲ್ವಿಚಾರಕಿ ಶ್ರೀಮತಿ ಅಭಿಲಾಷ ಮೋಟ್ನೂರು ಹೇಳಿದರು.
ಈ ಸಂದರ್ಭ ಸರ್ವಪಳ್ಳಿ ಡಾ ಎಸ್ ರಾಧಾಕೃಷ್ಣನ್ ನೆನಪಿಗಾಗಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರ ಕುರಿತು ಅನಿಸಿಕೆ ವ್ಯಕ್ತಪಡಿಸಿ ಗೌರವ ವಂದನೆ ಸಲ್ಲಿಸುತ್ತಾ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.


ಗ್ರಂಥಾಲಯ ಸಮಿತಿಯ ಸದಸ್ಯರಾದ ಶ್ರೀಮತಿ ಮಿತ್ರ ಕುಮಾರಿ ಚಿಕ್ಮುಳಿ, ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ದಿವ್ಯ ಸುಜನ್ ಗುಡ್ಡೆ ಮನೆ ಹಾಗೂ ಪೋಷಕರು ಹಾಜರಿದ್ದರು.