ಸಮೀಕ್ಷಾಳ ಚಿಕಿತ್ಸೆಗೆ ದೇಶದ ಹಾಲಿ ಸೈನಿಕ ಮತ್ತು ದಾನಿಗಳ ವತಿಯಿಂದ ಸಂಗ್ರಹವಾದ ದೇಣಿಗೆಯನ್ನು ಟ್ರಸ್ಟ್ ಮೂಲಕ ಹಸ್ತಾಂತರ

0

 

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಅಮರ ಸೇನಾ ರಕ್ತದಾನಿಗಳ ತಂಡ ಗುತ್ತಿಗಾರು, ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಇದರ ವತಿಯಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಸಮೀಕ್ಷಾ ಮೋಟುನ್ನೂರ್ ವಳಲಂಬೆ ಚಿಕಿತ್ಸೆಗೆ ಸಹಕಾರ ಮಾಡಿ ಎಂದು ಪೋಸ್ಟರ್ ಮೂಲಕ 26/8/22ರಿಂದ 07/09/22ರವರೆಗೆ ಸಾಮಾಜಿಕ ಜಾಲತಾಣ ಮುಖೆನ ಅಭಿಯಾನ ನಡೆಸಿತ್ತು, ಈ ಮನವಿ ಗಮನಿಸಿ ದೇಶದ ಹಾಲಿ ಸೈನಿಕ ರವಿಚಂದ್ರ ಛತ್ರಪ್ಪಾಡಿ ಪ್ರಸ್ತುತ ಉತ್ತರಾಖಂಡ್ ನಲ್ಲಿ ಸೇವೆಯಲ್ಲಿ ಇರುವ ಅವರ ವತಿಯಿಂದ 15ಸಾವಿರವನ್ನು ಹಾಗೂ ಇತರ ದಾನಿಗಳ ವತಿಯಿಂದ ಸಂಗ್ರಹದ ದೇಣಿಗೆಯ ಬಾಪ್ತ್ ಒಟ್ಟು 25500/ನ್ನು ಟ್ರಸ್ಟ್ ಖಾತೆಯ ಸ್ಟೇಟ್ ಮೆಂಟ್ ಸಮೇತವಾಗಿ ಚೆಕ್ ಮೂಲಕ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಅಮರ ಸೇನಾ ರಕ್ತದಾನಿಗಳ ತಂಡದ ಸದಸ್ಯರುಗಳಾದ ಮೋಹನ್ ಮುಕ್ಕೂರ್, ಪ್ರವೀಣ್ ಕೊಪ್ಪಡ್ಕ, ರಾಜೇಶ್ ಉತ್ರಂಬೆ, ಪ್ರವೀಣ್ ಕಲ್ಮಕಾರು, ಟ್ರಸ್ಟ್ ಸದಸ್ಯ ಮೋಹನ್ ದಾಸ್ ಶಿರಾಜೆ, ಉಪಸ್ಥಿತರಿದ್ದರು.