ಗುತ್ತಿಗಾರು: ಗ್ರಾಮ ನೈರ್ಮಲ್ಯ ಯೋಜನೆ ತಯಾರಿಯ ಸಭೆ

0

 

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಗ್ರಾಮ ನೈರ್ಮಲ್ಯ ಯೋಜನೆ ತಯಾರಿಸಲು ಕೇಂದ್ರ ಜಲಶಕ್ತಿ ಮಂತ್ರಾಲಯದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇವರ ಸೂಚನೆಯಂತೆ, ಗುತ್ತಿಗಾರು ಗ್ರಾಮದಲ್ಲಿ ಜನರ ಸಹಭಾಗಿತ್ವದೊಂದಿಗೆ ಇಂದು ಪಂಚಾಯತ್ ಗಿರಿಜನ ಸಭಾಭವನದಲ್ಲಿ ನಡೆಸಲಾಯಿತು.


ಗುತ್ತಿಗಾರು ಗ್ರಾಮದ ನಕ್ಷೆಯನ್ನು ಬಿಡಿಸಿ ಮುಖ್ಯ ಭಾಗಗಳನ್ನು ಗುರುತಿಸಿ.ಗ್ರಾಮ ಅಭಿವೃದ್ಧಿ ಗೆ ಬೇಕಾದ ಪೂರಕ ವ್ಯವಸ್ಥೆ ಯನ್ನು ಗುರುತಿಸಿ ವೆಬ್ಸೈಟ್ ನಲ್ಲಿ ಅಪ್ ಲೋಡ್ ಮಾಡುವ ನಿಟ್ಟಿನಲ್ಲಿ 2024ರ ವೇಳೆಗೆ ವ್ಯವಸ್ಥೆಯು ಸಂಪೂರ್ಣವಾಗಿ ಆಗಲು ಆಯಾ ಸ್ಥಳಗಳನ್ನು ಗುರುತಿಸಿ ನಕ್ಷೆಯ ಮುಖಾಂತರ ಹೇಳಲಾಯಿತು.
ಸಭೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ, ಸದಸ್ಯರಾದ ವೆಂಕಟ್ ವಳಲಂಬೆ, ಲತಾ ಆಜಡ್ಕ,ಮಂಜುಳ ಮುತ್ಲಾಜೆ, ಶಾರದಾ ಮುತ್ಲಾಜೆ, ಅನಿತಾ ಮೆಟ್ಟಿನಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,
ಅಮರ ಸಂಜೀವಿನಿ ಒಕ್ಕೂಟದ ಅದ್ಯಕ್ಷರು,ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರು, ಒಕ್ಕೂಟದ Mbk , ಹಾಗೂ, Lcrpಗಳು, ಗ್ರಂಥಾಲಯ ಮೇಲ್ವಿಚಾರಕಿ,ಪಂಚಾಯತ್ ಕಛೇರಿ ಸಿಬ್ಬಂದಿಗಳು ಗ್ರಾಮಸ್ಥರು, ಭಾಗವಹಿಸಿದ್ದರು.
ಗ್ರಾಮ ನೈರ್ಮಲ್ಯ ಐ.ಇ.ಸಿ ಸಂಯೋಜಕ ಸುರೇಶ್ ಬಾಳಿಲ ಕಾರ್ಯ ಯೋಜನೆ ಬಗ್ಗೆ ವಿವರಿಸಿದರು.

ಸಮುದಾಯ ಸಂಘಟಕರಾದ ಅಬಿಲಾಷ್ ಕೆ.ಎಂ ಹಾಗೂ ಘೋಷಿತ್ ಎನ್ ಜಿ ಸಹಕರಿಸಿದರು.