ಉಬರಡ್ಕ ಮಿತ್ತೂರು : ಜೇಸಿಐ ಸುಳ್ಯ ಪಯಸ್ವಿನಿಯ ಜೇಸಿಐ ಸಪ್ತಾಹ ನಮಸ್ತೆ 2022 ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

0

ಜೇಸಿಐ ಸುಳ್ಯ ಪಯಸ್ವಿನಿಯ ಜೇಸಿಐ ಸಪ್ತಾಹ ನಮಸ್ತೆ 2022 ಐದನೇ ದಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕ ಮಿತ್ತೂರು ಇಲ್ಲಿನ ವಿಧ್ಯಾರ್ಥಿಗಳಿಗಾಗಿ ಶಿಕ್ಷಣದ ಬಗ್ಗೆ ಮಾರ್ಗದರ್ಶನ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ತರಬೇತಿಯನ್ನು ಸುಳ್ಯ ಮಾಸ್ಟರ್ ಎಜುಕೇಷನ್ ಟ್ರಸ್ಟ್ ನ ಶ್ರೀ ಶಶಿಧರ್ ಎಂಜಿರವರು ನೀಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷರಾದ ಜೇಸಿ ರಂಜಿತ್ ಕುಕ್ಕೆಟ್ಟಿ ವಹಿಸಿದ್ದರು.


ಸಭಾ ಉದ್ಘಾಟನೆಯನ್ನು ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರು, ಜೇಸಿಐ ತರಬೇತುದಾರರಾದ ಜೇಸಿ ಹೆಚ್ ಜಿ ಎಫ್ ಅಬ್ದುಲ್ಲ ರವರು ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶುಭಹಾರೈಸಿದರು ವೇದಿಕೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಜೇಸಿ ಅನಿಲ್ ಕುಮಾರ್ ಬಳ್ಳಡ್ಕ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಮೀನಾಕ್ಷಿ ಕೆ ಆರ್, ಸಪ್ತಾಹ ನಿರ್ದೇಶಕಿ ಜೇಸಿ ಶೋಭಾ ಅಶೋಕ್ ಚೂಂತಾರುಉಪಸ್ಥಿತರಿದ್ದರು.
ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯದರ್ಶಿ ಜೇಸಿ ನವೀನ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here