ಸುಳ್ಯ ಶ್ರೀ ವೆಂಕಟರಮಣ ಸೊಸೈಟಿಗೆ ರೂ.1 ಕೋಟಿ 20 ಲಕ್ಷ ನಿವ್ವಳ ಲಾಭ – ಸದಸ್ಯರಿಗೆ ಶೇ 15 ಡಿವಿಡೆಂಡ್

0
14

 

ಸೊಸೈಟಿಯ ಬೆಳ್ಳಿ ವರ್ಷಕ್ಕೆ 25 ಶಾಖೆಗಳ ಗುರಿ : ಪಿ.ಸಿ.‌ಜಯರಾಮ್

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಈ ಬಾರಿ1 ಕೋಟಿ 20 ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು. ಹಾಗೂ ಸೊಸೈಟಿ ಆರಂಭಗೊಂಡು 25 ವರ್ಷ ಆಗಿದ್ದು ಬೆಳ್ಳಿ ವರ್ಷಕ್ಕೆ 25 ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ್ ಹೇಳಿದರು.

ಸೆ.17 ರಂದು ಕೊಡಿಯಾಲಬೈಲು ಗೌಡರ ಯುವ ಸೇವಾ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿವರ ನೀಡಿದರು.

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯು 1998 ರಲ್ಲಿ ಗೌಡರ ಯುವ ಸೇವಾ ಸಂಘ ಸುಳ್ಯ, ಇವರಿಂದ ಪ್ರವರ್ತಿಸಲ್ಪಟ್ಟಿದ್ದು, ಪ್ರಾರಂಭದಲ್ಲಿ ಕೇವಲ 430 ಸದಸ್ಯರಿಂದ ರೂ 5,95,500 ಪಾಲು ಬಂಡವಾಳದಿಂದ ಆರಂಭಿಸಿದ ಸಹಕಾರ ಸಂಘವಾಗಿದ್ದು, ಸುಳ್ಯ ತಾಲೂಕು ಮಟ್ಟಕ್ಕೆ ಸೀಮಿತವಾಗಿ ವ್ಯವಹಾರ ನಡೆಸಿದ್ದು, ಪ್ರಸ್ತುತ ತನ್ನ ಕಾರ್ಯ ಕ್ಷೇತ್ರವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಿಕೊಂಡು ವ್ಯವಹಾರ ನಡೆಸುತ್ತಿದೆ.

ನಮ್ಮ ಸಹಕಾರ ಸಂಘದಲ್ಲಿ ಮಾರ್ಚ್ 31, 2022 ರ ಅಂತ್ಯಕ್ಕೆ 14,875 ಜನ ವಿವಿಧ ವರ್ಗದ ಸದಸ್ಯರಿದ್ದು, ಇವರಿಂದ ರೂ. 3.63 ಕೋಟಿ ಪಾಲು ಬಂಡವಾಳ, ರೂ 127.34 ಕೋಟಿ ಠೇವಣಿ ಸಂಗ್ರಹಿಸಿದೆ. ಸದಸ್ಯರುಗಳಿಗೆ ರೂ. 107.26 ಕೋಟಿ ವಿವಿಧ ಸಾಲಗಳನ್ನು ಈ ಸಹಕಾರಿ ವರ್ಷದಲ್ಲಿ ವಿತರಿಸಲಾಗಿದೆ. ರೂ. 16.74 ಕೋಟಿ ವಿವಿಧ ಬ್ಯಾಂಕ್‌ಗಳಲ್ಲಿ ಧನ ವಿನಿಯೋಗ ಮಾಡಿದ್ದು ವರದಿ ವರ್ಷದಲ್ಲಿ ರೂ. 656.74 ಕೋಟಿ ವಾರ್ಷಿಕ ವ್ಯವಹಾರ ನಡೆಸಿ ಈ ಸಹಕಾರ ವರ್ಷದಲ್ಲಿ ರೂ. 120 ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ. 15 ರಷ್ಟು ಡಿವಿಡೆಂಟ್ ವಿತರಿಸಲಾಗಿದೆ.

ಸಂಘದ ಲೆಕ್ಕ ಪರಿಶೋಧನೆ ವರ್ಗೀಕರಣವು ‘ಎ’ ತರಗತಿಯಾಗಿದ್ದು, ಈ ಸಹಕಾರ ವರ್ಷದಲ್ಲಿ ಸಂಘದ ಸದಸ್ಯರುಗಳು, ಗ್ರಾಹಕರು, ಸಂಘದೊಂದಿಗೆ ಉತ್ತಮ ರೀತಿಯಲ್ಲಿ ಸಂಘವು ಈ ಸಹಕಾರ ವರ್ಷದಲ್ಲಿ ಹತ್ತನೇ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ

ಶೇ 90 ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಮಹಾಸಭೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಸಂಘದಲ್ಲಿ ರೂ. 14 ಕೋಟಿ ವಿವಿಧ ನಿಧಿಗಳಿದ್ದು, ಸಂಘದ ದುಡಿಯುವ ಬಂಡವಾಳವು ರೂ. 7.07 ಕೋಟಿಯಾಗಿರುತ್ತದೆ. ಸಂಘದ 5 ಶಾಖೆಗಳಲ್ಲಿ ಇ-ಸ್ಟಾಂಪಿಂಗ್ ಕೇಂದ್ರಗಳನ್ನು
ತೆರೆದಿದ್ದು, ಸುಳ್ಯ ಶಾಖೆಯಲ್ಲಿ ಕಡಿಮೆ ಬಾಡಿಗೆಗೆ ಸೇಫ್ ಲಾಕರನ್ನು ಸದಸ್ಯರುಗಳಿಗೆ ನೀಡುತ್ತಿದ್ದೇವೆ. 80, ಜವಳಿ, ಆರ್.ಟಿ.ಜಿ.ಎಸ್/ ನೆಫ್ಟ್ ಸೌಲಭ್ಯವನ್ನು ಕೂಡ ಕಲ್ಪಿಸಿರುತ್ತೇವೆ. ಸಂಘವು ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ ಹದಿನೇಳು ಶಾಖೆಗಳನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲಿ ಕೊಡಗು ಜಿಲ್ಲೆಯ ನಾಪೋಕ್ಲು ಹಾಗೂ ಸೋಮವಾರಪೇಟೆಗಳಲ್ಲಿ ಶಾಖೆಯನ್ನು ಆರಂಭಿಸಲಿದ್ದೇವೆ.

ಮುಂದಿನ ಆರ್ಥಿಕ ವರ್ಷದಲ್ಲಿ ರೂ. 180 ಕೋಟಿ ಠೇವಣಿ ಸಂಗ್ರಹಿಸಿ, ಸದಸ್ಯರುಗಳಿಗೆ ರೂ 160 ಕೋಟಿ ಸಾಲ ವಿತರಿಸಿ, ‘ರೂ.750 ಕೋಟಿ ವಾರ್ಷಿಕ ವ್ಯವಹಾರ ನಡೆಸುವ ಯೋಜನೆಯನ್ನು ಆಡಳಿತ ಮಂಡಳಿಯು ಹೊಂದಿರುತ್ತದೆ. ಹಾಗೂ ಮುಂದಿನ ಸರಕಾರ ವರ್ಷದಲ್ಲಿ ಬೆಳ್ಳಿ ಹಬ್ಬವನ್ನು ಆಲಚರಿಸುತ್ತಿದ್ದು, ಇದರ ಅಂಗವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ 6 ಶಾಖೆಗಳನ್ನು ಆರಂಭಿಸಿ, 25 ಶಾಖೆಗಳ ಗುರಿಯನ್ನು ಆಡಳಿತ ಮಂಡಳಿಯು ಹೊಂದಿದೆ ಎಂದವರು‌ ಹೇಳಿದರು.

ಸಂಘದ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ ತೀರ್ಥರಾಮ, ಚಂದ್ರ ಕೋಲ್ಚಾರ್, ಕೆ.ಸಿ ನಾರಾಯಣ ಗೌಡ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ, ದಾಮೋದರ ನಾರ್ಕೋಡು, ದಿನೇಶ ಮಡಪ್ಪಾಡಿ, ಶ್ರೀಮತಿ ಜಯಲಲಿತಾ ಕೆ.ಎಸ್, ಶ್ರೀಮತಿ ನಳಿನಿ ಸೂರಯ್ಯ, ಶ್ರೀಮತಿ ಲತಾ ಎಸ್ ಮಾವಜಿ, ಹೇಮಚಂದ್ರ ಐ.ಕೆ., ಶೈಲೇಶ್ ಅಂಬೆಕಲ್ಲು, ನವೀನ್ ಕುಮಾರ್ ಜಾಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.‌ವಿಶ್ವನಾಥ್ ಇದ್ದರು.

LEAVE A REPLY

Please enter your comment!
Please enter your name here