ಕೆ.ಪಿ.ಸಿ.ಸಿ ಸದಸ್ಯ ನಂದ ಕುಮಾರ್ ಕೊಲ್ಲಮೊಗ್ರಕ್ಕೆ ಭೇಟಿ

0

 

ಕೊಲ್ಲಮೊಗ್ರದ ಕಡಂಬಳ ಸೇತುವೆಗೆ ತಾತ್ಕಾಲಿಕ ವ್ಯವಸ್ಥೆ

 


ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯ ನಂದಕುಮಾರ್ ಮತ್ತು ಭರತ್ ಮುಂಡೋಡಿ ನಿಯೋಗ ಇಂದು ಕೊಲ್ಲಮೊಗ್ರ ಗ್ರಾಮದ ಕಡಂಬಳಕ್ಕೆ ಭೇಟಿ ನೀಡಿದರು.

ಕೊಲ್ಲಮೊಗ್ರು – ಕಡಂಬಳ ಸಂಪರ್ಕ ರಸ್ತೆಯ ಕಡಂಬಳ ಎಂಬಲ್ಲಿ ಸೇತುವೆಯೊಂದು ಆ.  ಮೊದಲ ವಾರ ಸುರಿದ ಮಳೆಗೆ ಸಂಪೂರ್ಣ ನೆಲ ಕಚ್ಚಿತ್ತು. ಅದಾದ ಬಳಿಕ ಯಾವುದೇ ವ್ಯವಸ್ಥೆಯನ್ನು ಮಾಡರಲಿಲ್ಲ. ಇದನ್ನು ಮನಗಂಡ ಕೆ ಪಿ ಸಿ ಸಿ ನಂದಕುಮಾರ್ ಅವರು ಇಂದು ಅಲ್ಲಿಗೆ ಭೇಟಿ ನೀಡಿ ಸೇತುವೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಅಲ್ಲದೆ ತಾತ್ಕಾಲಿಕ ವ್ಯವಸ್ಥೆಯಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಮೋರಿ ಹಾಕಿ ಸಂಚಾರ ವ್ಯವಸ್ಥೆ ಮಾಡಿಕೊಡಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಕಡಂಬಳದ ಸುಮಾರು 40 ಮನೆಗಳಿಗೆ ಕಳೆದ 50 ದಿನಗಳಿಂದ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಿರಲಿಲ್ಲ . ಆದರೂ ಮುರಿದು ಬಿದ್ದ ಸೇತುವೆಯ ಒಡೆದು ಕಬ್ಬಿಣದ ಸರಳು ತೆಗೆದುಕೊಂಡು ಹೋಗಿರುವಾಗಿ ತಿಳಿದು ಬಂದಿದೆ. ಈ ಸಂದರ್ಭ ಕಮಲಾಕ್ಷ ಪೆರ್ನಾಜೆ, ವಿಜೇಶ್ ಹಿರಿಯಡ್ಕ, ಮಣಿಕಂಠ ಕೊಳಗೆ , ದಿನೇಶ್ ಮಡ್ತಿಲ, ಧರ್ಮಪಾಲ ಪೆರ್ನಾಜೆ, ಅಶ್ವಥ್, ಯಶೋಧರ ಬಾಕಿಲ, ಪ್ರತಾಪ್, ಶಶಿಧರ ಕೊಯಿಕುಳಿ ಮತ್ತಿತರರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. ಈ ಸಂದರ್ಭ ಕಾಲಿಗೆ ಏಟಾಗಿ ಚಿಕಿತ್ಸೆ ಪಡೆಯುತ್ತಿರುವ ಮೋಹನ್ ಪೈಕ ಎಂಬವರ ಮನೆಗೆ ಭೇಟಿ ನೀಡಿ ನಂದಕುಮಾರ್ ಅವರು ಧನ ಸಹಾಯ ವಿತರಿಸಿದರು.

ವರದಿ: ಕುಶಾಲಪ್ಪ ಕಾಂತುಕುಮೇರಿ