ಸೆ.25: ಅಡ್ತಲೆ ಶಾಲೆಯಲ್ಲಿ ಉಚಿತ ಆಯುಷ್ಮಾನ್ ಆಭಾ ಕಾರ್ಡ್ ನೋಂದಣಿ ಕಾರ್ಯಕ್ರಮ

0

 

ನಾಗರಿಕ ಹಿತರಕ್ಷಣಾ ವೇದಿಕೆ , ಸ್ಪಂದನ ಗೆಳೆಯರ ಬಳಗ ಅಡ್ತಲೆ, ಸುದ್ದಿ‌ ಸಮೂಹ ಮಾಧ್ಯಮ ಮತ್ತು ಗ್ರಾಮ ಒನ್ ನಾಗರಿಕ ‌ಸೇವಾ ಕೇಂದ್ರ ಅರಂತೋಡು ಇವುಗಳ ಜಂಟಿ ಆಶ್ರಯದಲ್ಲಿ ಆಯುಷ್ಮಾನ್ ಆಭಾ ಕಾರ್ಡಿನ ಉಚಿತ ನೋಂದಣಿ ಕಾರ್ಯಕ್ರಮವು ಅಡ್ತಲೆ ಶಾಲೆಯಲ್ಲಿ ಸೆ.25ರಂದು ನಡೆಯಲಿದೆ.
ಆಭಾ ಕಾರ್ಡ್ ಮಾಡಿಸಿದರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಎ.ಪಿ. ಎಲ್ ಪಡಿತರದಾರರಿಗೆ 30% ರಿಯಾಯಿತಿ ಹಾಗೂ ಬಿ.ಪಿ.ಎಲ್ ಪಡಿತರದಾರರು‌ 5 ಲಕ್ಷ ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಈ‌ ಕಾರ್ಡ್ ಗೆ ವಯಸ್ಸಿನ ಮಿತಿ‌ ಇರುವುದಿಲ್ಲ. ಪಡಿತರ ಚೀಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬ ನಾಗರಿಕನೂ ನೋಂದಣಿ ಮಾಡಬಹುದು.

ದಾಖಲೆಗಳು

1. ಆಧಾರ್ ಕಾರ್ಡ್ ಮತ್ತು ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಮೊಬೈಲ್ ಸಂಖ್ಯೆ ಲಿಂಕ್ ಆಗದಿದ್ದರೆ ತಂಬ್(ಬೆರಳಚ್ಚು) ಮೂಲಕ ಮಾಡಲಾಗುತ್ತದೆ)
2. ರೇಶನ್ ಕಾರ್ಡ್

ವಿಸೂ: ಮನೆಯ ಎಲ್ಲಾ ಸದಸ್ಯರ ಅ.ಭಾ ಹೆಲ್ತ್ ಕಾರ್ಡ್ ನ್ನು ಒಬ್ಬ ಸದಸ್ಯ ಮಾಡಬಹುದು. ಆದರೆ ಎಲ್ಲರ ಆಧಾರ್ ಕಾರ್ಡ್ ಮತ್ತು ಅದಕ್ಕೆ ಜೋಡಣೆಯಾಗಿರುವ ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು‌ ತಿಳಿಸಬೇಕು.