ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

0

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸ.24ರಂದು ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೆಂಕಟೇಶ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರಂಭದಲ್ಲಿ 2021 -22ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ 37 ವಿದ್ಯಾರ್ಥಿಗಳನ್ನು, ಅತ್ಯುತ್ತಮ ಸಾಧನೆ ತೋರಿದ ಚಿರಾಗ್ ಐ.ಟಿ. ಯವರನ್ನು ಗೌರವಿಸಲಾಯಿತು.
ಸಾಧನೆಗೈದ ವಿದ್ಯಾರ್ಥಿಗಳ ಪರವಾಗಿ ಕು.ರಚನಾ, ಕು. ಮಮತಾ.ಪಿ, ರಕ್ಷಿತ್ ಬಿ.ಆರ್. ಹಾಗೂ ಪೋಷಕರ ಪರವಾಗಿ ತಿಮ್ಮಪ್ಪ ಗೌಡ ಮಾತನಾಡಿದರು. ವಿದ್ಯಾರ್ಥಿ ನಾಯಕ ಆದಿತ್ಯನ್, ಉಪನಾಯಕ ಸಾತ್ವಿಕ್ ಹಾಗೂ ಮಂತ್ರಿಮಂಡಲದ ಸದಸ್ಯರಿಗೆ ಕಾಲೇಜಿನ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. ಹಿರಿಯ ಉಪನ್ಯಾಸಕ ಕೃಷ್ಣ ಪಿ ವೇದಿಕೆಯಲ್ಲಿದ್ದರು.


ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಶಿವರಾಮ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಉಪನ್ಯಾಸಕಿ ಶ್ರೀಮತಿ ಹಸೀನ ಬಾನು ವಂದಿಸಿದರು. ಕು. ಸಂಧ್ಯಾ ಪ್ರಾರ್ಥಿಸಿದರು. ಕು. ಮೋನಿಕಾ ಮತ್ತು ಕು. ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ಶ್ರೀಮತಿ ಮೀರಾ,ಶ್ರೀಮತಿ ಸತ್ಯವತಿ, ಶ್ರೀಮತಿ ಹವ್ಯಶ್ರೀ ಸಹಕರಿಸಿದರು.