ನಿವೃತ್ತ ಉಪನ್ಯಾಸಕ ಪ್ರೊ। ಶ್ರೀಕೃಷ್ಣ ಭಟ್ ನಿಧನ

0
1216

p>

ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಮೂರು ದಶಕಗಳ ಕಾಲ ಉಪನ್ಯಾಸಕರಾಗಿದ್ದು ನಿವೃತ್ತರಾಗಿದ್ದ ಸುಳ್ಯ ಕೆರೆಮೂಲೆ ನಿವಾಸಿ ಪ್ರೊ। ಶ್ರೀಕೃಷ್ಣ ಭಟ್ ರವರು ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ತನ್ನ ಸೇವಾವಧಿಯಲ್ಲಿ ನಿಗದಿತ ರಜೆ ಹೊರತುಪಡಿಸಿ ಹೆಚ್ಚುವರಿ ರಜೆಯನ್ನು ಪಡೆಯದೆ ಸೇವೆ ಸಲ್ಲಿಸಿದವರೆಂಬ ಖ್ಯಾತಿ ಹೊಂದಿದ್ದ ಶ್ರೀಕೃಷ್ಣ ಭಟ್ ರವರು ನಿವೃತ್ತಿಯ ಬಳಿಕ ಉಜಿರೆಯ ಎಸ್.ಡಿ.ಎಂ. ಸ್ಪೆಶಲ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ಸುಳ್ಯ ವಲಯ ಹವ್ಯಕ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಶ್ರೀಕೃಷ್ಣ ಭಟ್ ರವರು ಅಮೇರಿಕಾ ಪ್ರವಾಸ ಮಾಡಿದ್ದರು. ಹೇಳದೆ ಉಳಿದದ್ದು ಎಂಬ ಹೆಸರಲ್ಲಿ ಎರಡು ಕಂತುಗಳಲ್ಲಿ ತಮ್ಮ ಆತ್ಮಕತೆ ಬರೆದಿದ್ದರು.
ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಶ್ರೀಕೃಷ್ಣ ಭಟ್ ರವರ ಪಾರ್ಥಿವ ಶರೀರವನ್ನು ಮಂಗಳೂರಿನಿಂದ ಸುಳ್ಯದ ಅವರ ಮನೆಗೆ ತರಲಾಗಿದ್ದು ಅಮೇರಿಕದಿಂದ ಹೊರಟು ಬರುತ್ತಿರುವ ಅವರ ಮಗ ತಲುಪಿದ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆಯೆಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here