ಕೇರ್ಪಡ ನವರಾತ್ರಿ ಉತ್ಸವ – ಧಾರ್ಮಿಕ ಸಭಾ ಕಾರ್ಯಕ್ರಮ

0

 

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಅ.೫ ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ವಸಂತ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಯಶೋದಾ ರಾಮಚಂದ್ರ ಧಾರ್ಮಿಕ ಉಪನ್ಯಾಸ ನೀಡಿದರು. ರಾಜ್ಯ ದಕ್ಷಿಣ ಪ್ರಾಂತ್ಯದ ಸಹ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ
ಮುರಳಿಕೃಷ್ಣ ಹಸಂತ್ತಡ್ಕ, ಅಂತರರಾಷ್ಟ್ರೀಯ ಯೋಗಪಟು ಕೆರೆಕ್ಕೋಡಿ ಹಾರ್ದಿಕ ಮತ್ತು ರಾಜ್ಯಮಟ್ಟದ ಗಾನಕೋಗಿಲೆ ಸಹನ್ಯ ಅಲೆಂಗಾರ ಹಾಗೂ ಹಲವಾರು ವರ್ಷಗಳಿಂದ ಕೇರ್ಪಡ ದೇವಸ್ಥಾನದಲ್ಲಿ ಹುಲಿವೇಷಧಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಿಟ್ಟು ಮರ್ಕಂಜ ನೂಜಾಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಎಡಮಂಗಲ ಗ್ರಾಪಂ ಅಧ್ಯಕ್ಷೆ ಶ್ರೀಮತಿ ಗೀತಾ ಪ್ರವೀಣ್, ಮುರುಳ್ಯ ಪಂಚಾಯಿತ್ ಅಧ್ಯಕ್ಷೆ ಜಾನಕಿ ಮುರುಳ್ಯ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎನ್.ಎ.ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಸದಸ್ಯ ವೆಂಕಪ್ಪ ಗೌಡ ಆಲಾಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೇಯಾ ಮತ್ತು ತಂಡದವರು ಪ್ರಾರ್ಥಿಸಿ, ಪ್ರದೀಪ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು. ಕೀರ್ತನ್ ಕಳತ್ತಜೆ ವಂದಿಸಿದರು.
ಬೆಳಿಗ್ಗೆ ಗಣಹೋಮ, ಸಿಯಾಳ ಅಭಿಷೇಕ, ಅಕ್ಷರಭ್ಯಾಸ, ಮಹಾ ಸಂಪ್ರೋಕ್ಷಣೆ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಆಲಂಕಾರು ನಕ್ಷತ್ರ ನೃತ್ಯ ಕಲಾ ತಂಡದವರಿಂದ ನೃತ್ಯ ಗಾನ ವೈಭವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ವೆಂಕಪ್ಪ ಗೌಡ ಆಲಾಜೆ,ರೂಪರಾಜ ರೈ ಪಜಿಂಬಿಲ,ಯೋಗಾನಂದ ಉಳಲಾಡಿ,ಶ್ರೀಮತಿ ಭಾಗ್ಯ ಪ್ರಸನ್ನ ಗುಂಡಿಮಜಲು,ಶ್ರೀ ಹರಿ ಕುಂಜೂರಾಯ ಪ್ರಧಾನ ಅರ್ಚಕರು,ನಾಗೇಶ ಆಳ್ವ ಕಟ್ಟಬೀಡು,ರಘುನಾಥ ಎಂಜೀರು,ಶ್ರೀಮತಿ ವಾರಿಜಾಕ್ಷಿ ಕೇರ್ಪಡ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.