ಕುಕ್ಕುಜಡ್ಕದಲ್ಲಿ ಶಮಿತಾ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

0

 

 

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಸತೀಶ್ ಆಚಾರ್ಯ ರವರ ಮಾಲಕತ್ವದ ಶಮಿತಾ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಸೆ.28 ರಂದು ಶುಭಾರಂಭಗೊಂಡಿತು.
ಪುರೋಹಿತ ವಿಶ್ವೇಶ್ವರ ಬಾಳಿಲ ರವರು ಗಣಪತಿ ಹವನ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಲಕರ ತಂದೆ ಜಯರಾಮ ಆಚಾರ್ಯ, ತಾಯಿ ಶ್ರೀಮತಿ ಕಮಲ, ಕಾಂಪ್ಲೆಕ್ಸ್ ‌ಮಾಲಕ ಹರ್ಷಿತ್ ಗೆಜ್ಜೆ, ನಿವೃತ್ತ ಮುಖ್ಯ ಶಿಕ್ಷಕ ಮೋಹನ ಗೌಡ, ಜಿನ್ನಪ್ಪ ಟೈಲರ್,‌ ಶ್ರೀಮತಿ ಸುಶ್ಮಿತಾ ಸತೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ಹೊಸ ಮನೆಯ ಅಂದವನ್ನು ಹೆಚ್ಚಿಸಬಲ್ಲ ಇಂಟಿರಿಯರ್ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಕೆಲಸ ಕ್ಲಪ್ತ ಸಮಯದಲ್ಲಿ ನುರಿತ ಕಾರ್ಮಿಕರಿಂದ ಮಾಡಿಸಿಕೊಡಲಾಗುವುದು‌. ಕಿಚನ್ ವರ್ಕ್, ಪಾರ್ಟಿಷನ್ ಕೆಲಸ,‌ಸ್ಲೈಡಿಂಗ್ ಕಿಟಕಿಗಳು,‌ಫೈಬರ್ ಡೋರ್ಸ್, ಪಿ.ವಿ.ಸಿ.ಸೀಲಿಂಗ್ ಕೆಲಸ ಮಾಡಿಸಿಕೊಡಲಾಗುವುದು ಎಂದು ಮಾಲಕರು‌ ತಿಳಿಸಿದರು.

LEAVE A REPLY

Please enter your comment!
Please enter your name here