ಮಂಡೆಕೋಲಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು

0

 

 

ಗ್ರಾಮ ಚಾವಡಿ ಹೆಸರಿನಲ್ಲಿ ಸಂವಾದ : ಹಲವು ವಿಚಾರಗಳ ಕುರಿತು ಚರ್ಚೆ

 

ಜಿಲ್ಲಾಧಿಕಾರಿಗಳ ನಡೆಯ ಕಡೆ ಎಂಬ ರಾಜ್ಯ ಸರಕಾರದ ಆದೇಶದ ಪ್ರಕಾರ ದ.ಕ. ಜಿಲ್ಲಾಧಿಕಾರಿಗಳು ಆಗಸ್ಟ್ 14ರಂದು ಸಂಜೆ ಮಂಡೆಕೋಲಿಗೆ ಆಗಮಿಸಿ ಗ್ರಾಮದಲ್ಲಿ ವಾಸ್ತವ್ಯ ಕೈಗೊಂಡಿದ್ದಾರೆ.
ಸಂಜೆ ಮಂಗಳೂರಿನಿಂದ ಮಂಡೆಕೋಲು ಗ್ರಾಮದ ಮುರೂರಿಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಯವರು ಮುರೂರು ಚೆಕ್ ಪೋಸ್ಟ್ ಪರಿಶೀಲನೆ ನಡೆಸಿದರು. ಅಲ್ಲಿಂದ ಮಂಡೆಕೋಲು ಗ್ರಾಮದ ಶಿವಾಜಿನಗರದಲ್ಲಿರುವ ಪುತ್ಯಶಾಲೆಗೆ ಆಗಮಿಸಿದರು ಅಲ್ಲಿ ಗ್ರಾಮ ಚಾವಡಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.
ಅಡಿಕೆ ಎಲೆ ಹಳದಿ ರೋಗ ಊರಿನ ರಸ್ತೆ ಅಭಿವೃದ್ಧಿ ಸ್ಮಶಾನ ಜಾಗ ಗಡಿ ಗುರುತು, ಗೋಮಾಳದ ಜಾಗ ಹಂಚಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಗಳು ನಡೆಯಿತು.
ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ತಹಸಿಲ್ದಾರ್ ಅನಿತಾಲಕ್ಷ್ಮಿ, ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷ ವಿನುತಾ ಪಾತಿಕಲ್ಲು, ಪಂಚಾಯ್ತಿ ಸದಸ್ಯರುಗಳು, ಇಲಾಖೆ ಅಧಿಕಾರಿಗಳು ಸೇರಿದಂತೆ ಊರವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here