ಬೆಳ್ಳಾರೆಯಲ್ಲಿ ಪಜ್ಜೆ ಫೂಟ್ ವೇರ್ಸ್ ಶುಭಾರಂಭ

0

 

ಬೆಳ್ಳಾರೆಯ ಮುಖ್ಯ ರಸ್ತೆ ಶಾಹಿನ್ ಮಾಲ್ ನಲ್ಲಿ ಪ್ರಜ್ವಲ್ ದರ್ಖಾಸ್ತು ಮತ್ತು ಸುಜಿತ್ ದೇವರಕಾನರವರ ಮಾಲಕತ್ವದ ಪಜ್ಜೆ ಫೂಟ್ ವೇರ್ಸ್ ಅ.19 ರಂದು ಶುಭಾರಂಭಗೊಂಡಿತು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ನೂತನ ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ವಾಣಿಜ್ಯ ವರ್ತಕ ಕೈಗಾರಿಕಾ ಸಂಘ ಬೆಳ್ಳಾರೆ ಇದರ ಅಧ್ಯಕ್ಷ ರಾಜೇಶ್ ಶ್ಯಾನುಭಾಗ್, ಆರ್.ಕೆ.ಭಟ್ ಕುರುಂಬುಡೇಲು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು, ಸದಸ್ಯರಾದ ಭವ್ಯ,ಕಟ್ಟಡ ಮಾಲಕರಾದ ಎಸ್.ಎಂ.ಅಬ್ದುಲ್ ಹಮೀದ್, ಪ್ರವರ್ತಕರಾದ ಬಿ.ಎ.ಮಹಮ್ಮದ್, ಚಿನ್ನಪ್ಪ ಗೌಡ ಚಳ್ಳತ್ತಡಿ ದೇವರಕಾನ, ಶ್ರೀಮತಿ ಮೀನಾಕ್ಷಿ, ರಂಜಿತ್ ದರ್ಖಾಸ್ತು, ಲಕ್ಷ್ಮೀನಾರಾಯಣ ಲಕ್ಷ್ಮೀ ಸ್ಟುಡಿಯೋ, ಅಜಿತ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ರಕ್ಷಿತ್ ಪೆರುವಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.