ಕೆ.ವಿ.ಜಿ. ಪಾಲಿಟೆಕ್ನಿಕ್ : ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

0

 

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಪ್ಲೇಸ್ಮೆಂಟ್ ವಿಭಾಗದ ವತಿಯಿಂದ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ವ್ರತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಆರ್ಬಿ ಕನ್ ಸ್ಟ್ರಕ್ಷನ್ ಸಂಸ್ಥೆಯ ಡಿಜಿಎಂ ಹನಿ ಮ್ಯಾಥ್ಯು, ಸೀನಿಯರ್ ಮ್ಯಾನೇಜರ್ ಗಳಾದ ಸೂರಜ್ ಹಾಗೂ ರಿನು ಮ್ಯಾಥ್ಯು ಭಾಗವಹಿಸಿ ಮಾಹಿತಿ ನೀಡಿದರು.
ಪ್ಲೇಸ್ಮೆಂಟ್ ಆಧಿಕಾರಿ ರಂಗಸ್ವಾಮಿ ಸ್ವಾಗತಿಸಿ ಸಿವಿಲ್ ವಿಭಾಗದ ಮುಖ್ಯಸ್ಥ ದೇವರಾಜ್ ಜಿ.ಕೆ ವಂದಿಸಿದರು. ಶಿಕ್ಷಕ ನಾರಾಯಣ ತೋರಣಗಂಡಿ ನಿರೂಪಿಸಿದರು.