ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

0

 

ಬೆಳ್ಳಾರೆ ಬಸ್ ನಿಲ್ದಾಣ ಬಳಿ ಕನ್ನಡ ನಡಿಗೆಗೆ ಚಾಲನೆ

ಸ್ನೇಹಿತರ ಕಲಾ ಸಂಘ ಬೆಳ್ಳಾರೆ, ಜ್ಞಾನದೀಪ ಶಿಕ್ಷಣ ಸಂಸ್ಥೆ ಬೆಳ್ಳಾರೆ, ಅಟೋರಿಕ್ಷಾ ಮಾಲಕ ಚಾಲಕರ ಸಂಘ ಬೆಳ್ಳಾರೆ, ಸ್ನೇಹಶ್ರೀ ಮಹಿಳಾ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವ ಕನ್ನಡ ನಡಿಗೆಗೆ ಬೆಳ್ಳಾರೆ ಬಸ್ ನಿಲ್ದಾಣ ಬಳಿ ಚಾಲನೆ ನೀಡಲಾಯಿತು.
ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಹಾಗೂ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ರವರು ಕನ್ನಡ ಧ್ವಜವನ್ನು ಸ್ನೇಹಿತರ ಕಲಾಸಂಘದ ಅಧ್ಯಕ್ಷ ವಸಂತ ಉಲ್ಲಾಸ್ ರವರಿಗೆ ಹಸ್ತಾಂತರಿಸುವುದರ ಮೂಲಕ ನಡಿಗೆಗೆ ಚಾಲನೆ ನೀಡಿದರು.


ಬಳಿಕ ಕನ್ನಡ ನಡಿಗೆ ಪ್ರಾಂಭಗೊಂಡು ಬೆಳ್ಳಾರೆ ಮುಖ್ಯರಸ್ತೆಯಲ್ಲಿ ಕೆಳಗಿನ ಪೇಟೆಯವರೆಗೆ ಹೋಗಿ ಅಲ್ಲಿಂದ ಬೆಳ್ಳಾರೆ ಅಂಬೇಡ್ಕರ್ ಭವನದವರೆಗೆ ನಡೆಯಿತು. ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಉಲ್ಲಾಸ್, ಕಾರ್ಯದರ್ಶಿ ಆನಂದ ಉಮಿಕ್ಕಳ, ಬೆಳ್ಳಾರೆ ರೋಟರಿ ಸಂಸ್ಥೆಯ ಪೂರ್ವಾಧ್ಯಕ್ಷ ಪದ್ಮನಾಭ ಬೀಡು, ಬೆಳಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪದ್ಮನಾಭ ನೆಟ್ಟಾರು, ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಸಾಮಾಜಿಕ ಧುರೀಣ ಆರ್.ಕೆ. ಭಟ್ ಕುರುಂಬುಡೇಲು, ಬೆಳ್ಳಾರೆ ಗೌರಿಪುರಂ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಕಾರ್ಯದರ್ಶಿ ಆನಂದ ಬೀಡು ಸೇರಿದಂತೆ ಸ್ನೇಹಿತರ ಕಲಾ ಸಂಘದ ನಿಕಟಪೂರ್ವ ಅಧ್ಯಕ್ಷ ಸಂಜಯ್ ನೆಟ್ಟಾರು, ಪದಾಧಿಕಾರಿಗಳು, ಸದಸ್ಯರು, ಜ್ಞಾನ ದೀಪ ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು,
ಸ್ಥಳೀಯರು ಕನ್ನಡ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಬೆಳ್ಳಾರೆ ಅಟೋರಿಕ್ಷಾ ಮಾಲಕರು ಚಾಲಕರು ತಮ್ಮ ವಾಹನದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು.