ಕೂತ್ಕುಂಜದಲ್ಲಿ ತಾಳ ಮದ್ದಳೆ ಸಪ್ತಾಹ

0

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ಶಿವಾಜಿ ಯುವಕ ಮಂಡಲ ಕೂತ್ಕುಂಜ ಸಹಭಾಗಿತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ-2022 ಕೂತ್ಕುಂಜ ಅಟಲ್ ಜಿ ಕ್ರೀಡಾಂಗಣದಲ್ಲಿ ನ.5 ರಂದು ಜರುಗಿತು.
ಕಾರ್ಯಕ್ರಮವನ್ನು ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ , ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ಉದ್ಘಾಟಿಸಿ‌ ಶುಭ‌ ಹಾರೈಸಿದರು. ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಕೂತ್ಕುಂಜ ಸಭಾಧ್ಯಕ್ಷತೆ ವಹಿಸಿದ್ದರು.ಅತಿಥಿಯಾಗಿ ಪ್ರಗತಿಪರ ಕೃಷಿಕ ದಿವಾಕರ ಬಿಳಿಮಲೆ‌ ಹಾಗೂ ಯುವಕ ಮಂಡಲದ ಅಧ್ಯಕ್ಷ ಉಜ್ವಲ್ ಚಿದ್ಗಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ
ರಜತ್ ಚಿದ್ಗಲ್ಲು ಸ್ವಾಗತಿಸಿದರು. ಷಣ್ಮುಖ ಹೊಸೊಕ್ಲು ನಿರೂಪಿಸಿದರು.ಆದರ್ಶ ಚಿದ್ಗಲ್ಲು ವಂದಿಸಿದರು.


ತಾಳಮದ್ದಳೆ ಪ್ರಸಂಗ ‘ಉತ್ತರನ ಪೌರುಷ’. ಭಾಗವತರಾಗಿ ಪ್ರಶಾಂತ್ ಪಂಜ, ರಚನಾ ಚಿದ್ಗಲ್ಲು, ಮದ್ದಳೆ ಚಂದ್ರಶೇಖರ ಗುರುವಾಯನಕೆರೆ , ಚೆಂಡೆ ಕುಮಾರ ಸುಬ್ರಹ್ಮಣ್ಯ, ಅರ್ಥದಾರಿಗಳಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಬಂಟ್ವಾಳ ಜಯರಾಮ ಆಚಾರ್ಯ, ವೆಂಕಟೇಶ್ ಕುಮಾರ್, ಶಿವಕುಮಾರ್ ಪಾಲ್ಗೊಂಡಿದ್ದರು.ಕಾರ್ಯಕ್ರಮ ಸಂಯೋಜಕ ಜಯರಾಮ ಕಲ್ಲಾಜೆ ನಿರೂಪಿಸಿದರು.