ನ.13 ಮತ್ತು 14 ರಂದು ಫ್ರೆಂಡ್ಸ್ ನಾವೂರು ಬೀಜಕೊಚ್ಚಿ‌ ನೇತೃತ್ವದಲ್ಲಿ 2 ದಿನಗಳ ಧಾರ್ಮಿಕ ‌ಮತ ಪ್ರಭಾಷಣ

0

ಸುಳ್ಯ ಗಾಂಧಿನಗರದ ಫ್ರೆಂಡ್ಸ್ ನಾವೂರು ಬೀಜಕೊಚ್ಚಿ ಇವರ ನೇತೃತ್ವದಲ್ಲಿ 2 ದಿನಗಳ ಧಾರ್ಮಿಕ ಮತ ಪ್ರಭಾಷಣ ನ.13 ಮತ್ತು ನ.14 ರಂದು ನಡೆಯಲಿದೆ.

ನ.13 ರಂದು ನಾವೂರು ಬೀಜಕೊಚ್ಚಿಯಲ್ಲಿ ನಡೆಯುವ ಕಾರ್ಯಕ್ರಮವು ಮಹ್ ರೂಂ ಹಮೀದ್ ಪಿ.ಎ. (ಸಹನಾ) ವೇದಿಕೆಯಲ್ಲಿ ನಡೆಯಲಿದ್ದು ಮುಖ್ಯ ಭಾಷಣಗಾರರಾಗಿ ಇ.ಪಿ. ಅಬೂಬಕ್ಕರ್ ಖಾಸಿಮಿ ಪತ್ತನಾಪುರಂ ಕೇರಳ ಭಾಗವಹಿಸಲಿದ್ದಾರೆ.

ಉಮ್ಮರ್ ಮುಸ್ಲಿಯಾರ್ ಮರ್ಧಾಳ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ನ.14 ರಂದು ಮಹ್ ರೂಂ ಹಾಜಿ‌ ಮಹಮ್ಮದ್ ಜೆ.ಎಸ್. (ಜನತಾ) ವೇದಿಕೆಯಲ್ಲಿ ಪೆರೋಡ್ ಮುಹಮ್ಮದ್ ಅರ್ಝರಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸಭಾವ್ ಸಖಾಫಿ ಹಿಮಮಿ ಬೀಜಕೊಚ್ಚಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ

ಎರಡು ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫ್ರೆಂಡ್ಸ್ ನಾವೂರು ಬೀಜಕೊಚ್ಚಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ.