ಗುಂಡೆಸೆತದಲ್ಲಿ ಭುವಿ ಜಿ ರೈ ಪ್ರಥಮ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ
ಕ್ರೀಡಾಕೂಟ 2022-23 ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಜರುಗಿದ್ದು, 14ರ ವಯೋಮಾನದ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ ಭುವಿ ಜಿ. ರೈ ಅವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ 7ನೇ ತರಗತಿ ವಿದ್ಯಾರ್ಥಿನಿಯಾಗಿರುವ ಭುವಿ. ಜಿ. ರೈ ಅವರು ಗುಂಡು ಎಸೆತದಲ್ಲಿ ಭಾಗವಹಿಸಿ, ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರುಗುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಭುವಿ ಜಿ. ರೈ ಅವರು ಜಾಲ್ಸೂರು ಗ್ರಾಮದ ಕುಕ್ಕಂದೂರು ಗಣೇಶ್ ರೈ ಕುಕ್ಕಂದೂರು ಹಾಗೂ ಶ್ರೀಮತಿ ಆಶಾ ಗಣೇಶ್ ರೈ ದಂಪತಿಗಳ ಪುತ್ರಿ.