ಜೇಸಿಐ ಪಂಜ ಪಂಚಶ್ರೀ ರಜತ ರಶ್ಮಿ ಸಂಭ್ರಮ 🔸 ರಜತ ಚಿತ್ತಾರ-ಉದ್ಘಾಟನಾ ಕಾರ್ಯಕ್ರಮ, ಕಲಾ ಅಭಿರುಚಿ ಅಳವಡಿಸಿ -ತಾರನಾಥ್ ಕೈರಂಗಳ್, ಜೇಸಿಐ ಪಂಜ ಪಂಚಶ್ರೀ ಉತ್ತಮ ಗೌರವದ ಸ್ಥಾನಗಳಿಸಿದೆHGF ಪ್ರದೀಪ್ ಕುಮಾರ್ ರೈ ಪನ್ನೆ

0

ಜೇಸಿಐ ಪಂಜ ಪಂಚಶ್ರೀ ಇದರ ಬೆಳ್ಳಿ ಹಬ್ಬ-‘ರಜತ ರಶ್ಮಿ’ ಕಾರ್ಯಕ್ರಮದ ಅಂಗವಾಗಿ ರಜತ ಚಿತ್ತಾರ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
ನ.11. ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಜರಗಿತು.ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಸಭಾಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು ಜಿಲ್ಲಾ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ತಾರಾನಾಥ್ ಕೈರಂಗಳ್ ಉದ್ಘಾಟಿಸಿ ಮಾತನಾಡಿ
“ಚಿತ್ರ ಕಲಾ ಅಭಿರುಚಿ ಅಳವಡಿಸಿ ಕೊಂಡಾಗ ನಾವು ಯಾವುದೇ ಹುದ್ದೆಗೆ ಹೋದರು, ಕಲಾ ಪ್ರಜ್ಞೆ ಇರುತ್ತದೆ. ಯಾವುದೇ ಕ್ಷೇತ್ರಲ್ಲೂ ಕಲೆ ಬೆಳೆವಣಿಗೆಗೆ ಪೂರಕವಾಗುತ್ತದೆ” ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಪೂರ್ವ ವಲಯಾಧಿಕಾರಿ HGF ಪ್ರದೀಪ್ ಕುಮಾರ್ ರೈ ಪನ್ನೆ ಮಾತನಾಡಿ”ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಾಸದ ಸಂಸ್ಥೆ ಜೇಸಿ. ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಪೋಷಿಸಿ ಉದ್ದೀಪನ ಗೊಳಿಸಿದೆ ಜೇಸಿಐ ಪಂಜ ಪಂಚಶ್ರೀ . ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಹಿತ್ಯಿಕವಾಗಿ, ಕ್ರೀಡೆ,ಕೃಷಿ, ವಿವಿಧ ಕ್ಷೇತ್ರದಲ್ಲಿ ದುಡಿಯುವವರಿಗೆ, ಬೆಳೆಯುವವರಿಗೆ ಪೂರಕವಾದ ಹೊಸ ತನದ ಕಾರ್ಯಕ್ರಮಗಳನ್ನು ಜೇಸಿಐ ಪಂಜ ಪಂಚಶ್ರೀ ರಜತ ಮಹೋತ್ಸವದಲ್ಲಿ ಅಳವಡಿಸಿ ಕೊಂಡಿದ್ದಾರೆ.ಈ ಸಂಸ್ಥೆಯು ಜನಪರ ಕಾಳಜಿಯಿಂದ ಜನ ಪ್ರೀತಿ ಗಳಿಸಿದೆ.ಸಾಮಾಜದಿಂದ ,ಜೇಸಿ ವಲಯದಲ್ಲಿ ಉತ್ತಮ ಗೌರವ ಸ್ಥಾನ ಗಳಿಸಿದೆ “. ಎಂದು ಅವರು ಹೇಳಿದರು.


ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಮಾತನಾಡಿ
“ಮಕ್ಕಳಿಗೆ ಬಾಲ್ಯದಿಂದಲೇ ಚಿತ್ರಕಲೆಯ ಆಸಕ್ತಿ ಮೂಡಿಸಲು ಪೋಷಕರು ಪ್ರೋತ್ಸಾಹ ಅಗತ್ಯವಿದೆ” ಎಂದು ಹೇಳಿದರು.
ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಮತ್ತು ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಬೆಳ್ಳಿ ‌ಹಬ್ಬ ಸಮಿತಿಯ ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ, ಬೆಳ್ಳಿ ‌ಹಬ್ಬ ಕಾರ್ಯಕ್ರಮ ನಿರ್ದೇಶಕ ಲೋಕೇಶ್ ಆಕ್ರಿಕಟ್ಟೆ, ರಜತ ಚಿತ್ತಾರ ಕಾರ್ಯಕ್ರಮ ಸಂಯೋಜಕ ಸೋಮಶೇಖರ ನೇರಳ,ಘಟಕದ ನಿಕಟ ಪೂರ್ವಾಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿ,ಕಾರ್ಯದರ್ಶಿ ಕೌಶಿಕ್ ಕುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಜೇಸಿಐ ಪಂಜ ಪಂಚಶ್ರೀ ಸ್ಥಾಪಿಸಲು ಕಾರಣೀಕರ್ತರಾದ ಬೆಳ್ಳಾರೆ ಜೇಸಿಐ ದಶಮಾನೋತ್ಸವದ ಅಧ್ಯಕ್ಷ, ಪೂರ್ವ ವಲಯಾಧಿಕಾರಿ ಪ್ರದೀಪ್ ಕುಮಾರ್ ರೈ ಪನ್ನೆ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುನೀತ್ ಮೂಲೆಮನೆ ವೇದಿಕೆಗೆ ಆಹ್ವಾನಿಸಿದರು.ಪವನ್ ಮೂಲೆಮನೆ ಜೇಸಿ ವಾಣಿ ನುಡಿದರು.ಸೋಮಶೇಖರ ನೇರಳ ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕ ಗೈದರು.ಅಶೋಕ್ ಕುಮಾರ್, ಚರಣ್ ದೇರಪ್ಪಜ್ಜನಮನೆ , ನಾಗ್ ಮಣಿ ಕೆದಿಲ ಅತಿಥಿಗಳನ್ನು ಪರಿಚಯಿಸಿದರು.ಪ್ರಸನ್ನ ವೈ ಟಿ ವಂದಿಸಿದರು.
ವಿಚಾರಗೋಷ್ಠಿ: ಸಭಾ ಕಾರ್ಯಕ್ರಮದ ಬಳಿಕ
ಪೋಷಕರಿಗಾಗಿ ವಿಚಾರಗೋಷ್ಠಿ-ಸೃಜನಶೀಲ ಬದುಕಿನಲ್ಲಿ ಚಿತ್ರಕಲೆ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಕೊಡಗು ಶಿಕ್ಷಣ ಚಿಂತಕ ಊ. ರಾ ನಾಗೇಶ್ ಪಾಲ್ಗೊಂಡಿದ್ದರು.


ಅಪರಾಹ್ನ ಬಹುಮಾನ ವಿತರಣಾ ಕಾರ್ಯಕ್ರಮವು ಜರುಗಲಿದೆ. ಬಹುಮಾನ ವಿತರಕರಾಗಿ ಬಂಟ್ವಾಳ ಎಸ್ ವಿ ಎಸ್ ಕಾಲೇಜು ನಿವೃತ್ತ ಪ್ರಾಧ್ಯಾಪಕರಾದ ಶ್ರೀಮತಿ ಲೀಲಾವತಿ ಬಾಲಕೃಷ್ಣ ನೇರಳ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜೇಸಿಐ ಪಂಜ ಪಂಚಶ್ರೀ ಸಂಸ್ಥಾಪಕ ಮಾರ್ಗದರ್ಶಕ ವಾಸುದೇವ ನಡ್ಕ, ಚಾರ್ವಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ ಉಪಸ್ಥಿತರಿರುವರು.
ಇಂದು ಸಂಜೆ ಆಳ್ವಾಸ್ ಸಾಂಸ್ಕೃತಿಕ ವೈಭವ :
ಸಂಜೆ ಗಂಟೆ 6ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವವು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರುಗಲಿದೆ. ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್ ಅಂಗಾರ ಉದ್ಘಾಟಿಸಲಿದ್ದಾರೆ. ರಜತ ರಥ ಸ್ಮರಣ ಸಂಚಿಕೆ ಮುಖಪುಟವನ್ನು ಮಂಗಳೂರು ಲೋಕಸಭಾ ಕ್ಷೇತ್ರ ಮಾನ್ಯ ಸಂಸದ ನಳಿನ್ ಕುಮಾರ್ ಕಟೀಲ್ ಅನಾವರಣ ಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್, ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ, ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಸುಳ್ಯ ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷ ಸುಧಾಕರ್ ರೈ, ಪಂಜ ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷ ಶಶಿಧರ ಪಳಂಗಾಯ ಉಪಸ್ಥಿತರಿರುವರು.
ನಾಳೆ ಸಮಾರೋಪ:
ನ. 12ರಂದು ಸಂಜೆ 6ರಿಂದ ಸಮಾರೋಪ ಸಮಾರಂಭವು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ನಡೆಯಲಿದೆ. ಕರ್ನಾಟಕ ಸರಕಾರದ ವಿಶ್ರಾಂತ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ‘ಭವ್ಯ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ’ ಎಂಬ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್ ‘ರಜತ ರಶ್ಮಿ ಸಾಧನೆಯ ಹಾದಿಯಲ್ಲಿ ಬೆಳ್ಳಿ ಬೆಳಕು’ ಎಂಬ ವಿಷಯದಲ್ಲಿ ಸಮಾರೋಪ ಭಾಷಣ ಮಾಡಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಕಮಲ ಪತ್ರ ಪುರಸ್ಕಾರ ಪಡೆಯಲಿದ್ದಾರೆ. ವಲಯಾಧ್ಯಕ್ಷ ಜೇಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತ ಪುರಸ್ಕರಿಸಲಿರುವರು. ಜೇಸಿಐ ವಲಯ 15ರ ಪೂರ್ವ ವಲಯ ಅಧ್ಯಕ್ಷರುಗಳು ಉಪಸ್ಥಿತರಿರುವರು .
ಯುವ ತೇಜಸ್ಸು ಟ್ರಸ್ಟ್ ಪಂಜ, ಶಾರದಾಂಬ ಭಜನಾ ಮಂಡಳಿ ಪಂಜ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಗಳಿಗೆ ಪುರಸ್ಕಾರ ನಡೆಯಲಿದೆ.
ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ ವಿತರಣೆ ನಡೆಯಲಿದೆ. ಬಳಿಕ ಪ್ರತಿಷ್ಠಿತ ತಂಡಗಳ ಮುಕ್ತ ಡ್ಯಾನ್ಸ್ ಸ್ಪರ್ಧೆ ಸಿಲ್ವರ್ ಸ್ಟೆಪ್ಸ್ 2022 ನಡೆಯಲಿದೆ.