ಪಂಜ : ಅಡಿಕೆ ಎಲೆ ಚುಕ್ಕೆ ರೋಗ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ , ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ವಿಟ್ಲ, ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಇವರ ಸಹಯೋಗದೊಂದಿಗೆಅಡಿಕೆ ಎಲೆ ಚುಕ್ಕೆ ರೋಗ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ
ನ.12 ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಂಘದ ಹಿರಿಯ ಸದಸ್ಯ,ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಚೀನಪ್ಪ ಗೌಡರವರು ದೀಪ ಬೆಳಗಿಸಿ ಉದ್ಘಾಟಿಸಿದರು.ಸಭಾಧ್ಯಕ್ಷತೆಯನ್ನು ಸಂಘದ ನಿರ್ದೇಶಕ ವಾಚಣ್ಣ ಕೆರೆಮೂಲೆ‌ ವಹಿಸಿದ್ದರು.ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಮಾತನಾಡಿ
” ಅಡಿಕೆ ಕೃಷಿ ಸರಿಯಾದ ಮಾಹಿತಿ ಅರಿತು .ಅದಕ್ಕೆ ಪೂರಕವಾದ ಗೊಬ್ಬರಗಳನ್ನು ಬಳಸಿದಾಗ ಕೃಷಿಗೆ ಬರುವ ರೋಗಗಳನ್ನು ತಪ್ಪಿಸಲು ಸಾಧ್ಯವಿದೆ. ರೋಗ ಬಂದ ತೋಟಗಳಿಗೆ ಸಿಕ್ಕ ಸಿಕ್ಕ ಔಷದ ಸಿಂಪಡಿಸ ಬೇಡಿ ಅದಕ್ಕೆ ಪೂರಕವಾದ ಔಷದ ಸಿಂಪಡಿಸಬೇಕು”ಎಂದು ಹೇಳಿದರು.


ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ ಮಾತನಾಡಿ
“ಹಿಂದೆ ಜೀವನಕ್ಕೆ ಬೇಕಾಗುವಷ್ಟೆ ಕೃಷಿ ಮಾಡುತ್ತಿದ್ದರು.ಆದರೆ ಇಂದು ಇಡೀ ಭೂಮಿಯಲ್ಲಿ ಕೃಷಿ ಬೆಳೆದಿರುವುದು ಸಂತೋಷದ ವಿಷಯ.ಆದರೆ ಅದರಲ್ಲಿ ಬರುವ ಸಮಸ್ಯೆಗಳಿಗೆ ನಾವೇ ವಿಜ್ಞಾನಿಗಳು ಆಗ ಬಾರದು.ಸರಿಯಾದ ಕೃಷಿ ಪದ್ಧತಿಗಳು, ನಿರ್ವಹಣೆ ಅರಿತು ಮುನ್ನಡೆಸಿ” ಎಂದು ಹೇಳಿದರು.


ಸಂಘದ ನಿಕಟಪೂರ್ವಾದ್ಯಕ್ಷ ಸುಬ್ರಹ್ಮಣ್ಯ ಕುಳ,
ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ವಿಟ್ಲ ಇದರ ಹಿರಿಯ ವಿಜ್ಞಾನಿ ಡಾ.ನಾಗರಾಜ್ ಎನ್ ಆರ್ ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಿರಾಜ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಕುಳ ಸ್ವಾಗತಿಸಿದರು.ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು.ನೇಮಿರಾಜ ಪಲ್ಲೋಡಿ ವಂದಿಸಿದರು. ಬಳಿಕ ಮಾಹಿತಿ ಕಾರ್ಯಾಗಾರ ಜರುಗಿತು.