ಕೇರಳದಲ್ಲಿ ನಾಪತ್ತೆಯಾಗಿದ್ದ ಸಂಪಾಜೆಯ ವ್ಯಕ್ತಿ ಕೊಟ್ಟಾಯಂನಲ್ಲಿ ಪತ್ತೆ

0

ಕಳೆದ ಮಾರ್ಚ್ ತಿಂಗಳಲ್ಲಿ ಸಂಪಾಜೆಯಿಂದ ಕೇರಳಕ್ಕೆ ಹೋಗಿ ಕಾಣೆಯಾಗಿದ್ದ ಹಂಡನಮನೆ ಬೆಳ್ಯಪ್ಪ ಗೌಡರು ಇಂದು ಕೇರಳದಲ್ಲಿ ಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.
ಹಂಡನಮನೆ ಬೆಳ್ಯಪ್ಪ ಗೌಡರು ಕಳೆದ ಮಾರ್ಚ್ 12 ರಂದು ಸಂಪಾಜೆಯಿಂದ ಕೇರಳ ಕಡೆಗೆ ಹೋಗುತ್ತಿದ್ದ ಸಂಪಾಜೆಯ ಸುಧಾಕರ ಎಂಬವರ ಲಾರಿಯಲ್ಲಿ ಕ್ಲೀನರ್ ಆಗಿ ಹೋಗಿದ್ದರು. ಕೇರಳದ ಎರ್ನಾಕುಲಂನಲ್ಲಿ ಅವರು ಕಾಣೆಯಾಗಿದ್ದರು. ಅವರನ್ನು ಹುಡುಕಾಡಿ ಸಿಗದಿದ್ದಾಗ ಲಾರಿ ಚಾಲಕ ಊರಿಗೆ ಹಿಂತಿರುಗಿದ್ದರು. ಮನೆಯವರು ಆತಂಕಗೊಂಡು ಸಾಕಷ್ಟು ಹುಡುಕಾಟ ನಡೆಸಿ ಬಳಿಕ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದುವರೆಗೆ ಅವರು ಪತ್ತೆಯಾಗಿರಲಿಲ್ಲ.

ಇಂದು ಕೇರಳದ ಕೊಟ್ಟಾಯಂ ನಿಂದ ಪೊಲೀಸರು ಸಂಪಾಜೆ ಪೋಲಿಸರನ್ನು ಸಂಪರ್ಕಿಸಿ ಬೆಳ್ಯಪ್ಪ ಗೌಡರು ಕೇರಳದ ಕೊಟ್ಟಾಯಂನಲ್ಲಿ ಪತ್ತೆಯಾಗಿರುವ ವಿಚಾರವನ್ನು ತಿಳಿಸಿದ್ದಾರೆ.
ಬೆಳಿಯಪ್ಪ ಗೌಡರನ್ನು ಕೊಟ್ಟಾಯಂನ ಆಶ್ರಮವೊಂದಕ್ಕೆ ಯಾರೋ ದಾಖಲಿಸಿದ್ದರೆನ್ನಲಾಗಿದೆ. ನೆನಪು ಶಕ್ತಿ ಕಳೆದುಕೊಂಡಿದ್ದ ಅವರು ಬಳಿಕ ಚೇತರಿಸಿಕೊಂಡು ಇದೀಗ ಸಂಪಾಜೆಯ ವಿಳಾಸ ತಿಳಿಸಿರುವುದರಿಂದ ಆಶ್ರಮದವರು ಪೋಲೀಸರಿಗೆ ತಿಳಿಸಿ, ಪೋಲಿಸರು ಸಂಪಾಜೆ ಪೊಲೀಸರನ್ನು ಸಂಪರ್ಕಿಸಿ ಬೆಳಿಯಪ್ಪ ಗೌಡರ ಬಗ್ಗೆ ತಿಳಿಸಿದರು. ಮಡಿಕೇರಿ ಠಾಣೆಯಲ್ಲಿ ಅವರ ಕಾಣೆ ಅರ್ಜಿ ದಾಖಲಾಗಿರುವುದರಿಂದ ನಾಳೆ ಪೋಲಿಸರು ವೇಳೆ ಬೆಳ್ಯಪ್ಪ ಗೌಡರ ಮನೆಯವರೊಂದಿಗೆ ಕೊಟ್ಟಾಯಂಗೆ ತೆರಳಿ ಅಲ್ಲಿಂದ ಅವರನ್ನು ಹಿಂದಕ್ಕೆ ಕರೆದುಕೊಂಡು ಬರಲಿದ್ದಾರೆಂದು ತಿಳಿದು ಬಂದಿದೆ.