ಜಾಲ್ಸೂರು : ಸೈಬರ್ ಕ್ರೈಂ ಮತ್ತು ಮಾನವ ಕಳ್ಳ ಸಾಗಾಣಿಕೆ ಕುರಿತು ಕಾನೂನು ಅರಿವು ಕಾರ್ಯಕ್ರಮ

0

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಸೈಬರ್ ಕ್ರೈಂ ಮತ್ತು ಮಾನವ ಕಳ್ಳ ಸಾಗಾಣಿಕೆ ವಿಷಯದ ಕುರಿತು ಕಾನೂನು ಅರಿವು ಕಾರ್ಯಕ್ರಮ ನವಂಬರ್ 14ರಂದು ಜಾಲಸೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಎಂ ಬಾಬು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ವಕೀಲ ದಳ ಸುಬ್ರಾಯ ಭಟ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಗಳನ್ನು ಬಳಸಿ ,ಮತ್ತು ಇಂಟರ್ನೆಟ್ ಮೂಲಕ ಯಾವುದೆಲ್ಲ ರೀತಿಯಲ್ಲಿ ಸೈಬರ್ ಕ್ರೈಂ ಗಳು ನಡೆಯುತ್ತಿದೆ, ಹಾಗೂ ಇವುಗಳಿಂದ ಉಂಟಾಗುವ ದುಷ್ಪರಿಣಾಮಗಳು, ಅವುಗಳಿಂದ ರಕ್ಷಣೆ ಹೊಂದುವ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.


ಅದೇ ರೀತಿ ಅಪರಿಚಿತರ ಮಾತಿಗೆ ಸಿಲುಕಿ ಮಾನವ ಕಳ್ಳ ಸಾಗಾಣಿಕೆಗೆ ತುತ್ತಾಗದಂತೆ ಮಕ್ಕಳು ಯಾವ ರೀತಿ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಬೇಕು ಎಂಬುದರ ಬಗ್ಗೆ ಕಾನೂನು ಅರಿವು ನೀಡಿದರು.
ಕಾರ್ಯಕ್ರಮವನ್ನು ಸಂಘಟಿಸಿದ ಸುಳ್ಯ ನ್ಯಾಯಾಲಯದ ಪ್ಯಾನಲ್ ವಕೀಲರಾದ ಜೆ ಎನ್ ಅಬೂಬಕ್ಕರ್ ಅಡ್ಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾಲಸೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಲೀಲಾವತಿ ಇ, ಪಿ ಡಿ ಓ ಸುಬ್ಬಯ್ಯ, ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ತೇಜಾವತಿ, ವಕೀಲರಾದ ನಾಗೇಶ್, ಕೆವಿಜಿ ಕಾಲೇಜ್ ಮುಖ್ಯಸ್ಥ ರಜತ್ ಅಡ್ಕಾರ್, ಕಾನೂನು ಸೇವೆಗಳ ಸಮಿತಿ ಅರೆಕಾಲಿಕ ಸ್ವಯಂಸೇವಕ ಹಸೈನಾರ್ ಜಯನಗರ, ಗ್ರಾ. ಪಂ ಸದಸ್ಯರುಗಳಾದ ಶ್ರೀಮತಿ ಅಂಬಿಕಾ, ಈಶ್ವರ ನ್ಯಾಕ್ ಅಂಚೆಪಾಲಕ ಹರೀಶ್ ಕೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವೇದಾವತಿ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಕಚೇರಿ ಸಿಬ್ಬಂದಿ ಚಿದಾನಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಕೀಲ ಅಬೂಬಕ್ಕರ್ ಅಡ್ಕಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಸ್ಥಳೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.