ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಭರತ್ ಮುಂಡೋಡಿ ಅವರಿಂದ ಪಕ್ಷಕ್ಕೆ ಅರ್ಜಿ

0

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಟಿಕೆಟ್ ಬಯಸಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ಭರತ್ ಮುಂಡೋಡಿ ಅವರು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.


ಜಿಲ್ಲಾ ಪರಿಷತ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಅನುಭವ ಹೊಂದಿರುವ ಭರತ್ ಮುಂಡೋಡಿ ಅವರು ಜಿಲ್ಲಾ ಕಾಂಗ್ರೆಸ್ ನ ಪ್ರಭಾವಿ ನಾಯಕರೂ ಆಗಿದ್ದಾರಲ್ಲದೆ ಕಳೆದ ಅವಧಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಈಗ ಅವರು ಕೆಪಿಸಿಸಿ ವಕ್ತಾರರಾಗಿದ್ದಾರೆ. ಅದಕ್ಕಿಂತ ಮೊದಲು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.


2008 ಮತ್ತು 2013ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಭರತ್ ಮುಂಡೋಡಿ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯುವುದು ಖಚಿತವೆಂದು ಹೇಳಲಾಗಿತ್ತು. ಅವರ ಹೆಸರು ಕೆಪಿಸಿಸಿಯಿಂದ ಅಂತಿಮಗೊಂಡು ದೆಹಲಿಗೆ ಹೋಗಿತ್ತು. ಆದರೆ ದೆಹಲಿಯಿಂದ ಅಂತಿಮ ಘೋಷಣೆಯಾಗುವಾಗ ಬದಲಾವಣೆಯಾಗಿತ್ತು.


ಈ ಬಾರಿ ಮತ್ತೆ ಭರತ್ ಮುಂಡೋಡಿ ಅವರು ಕೆಪಿಸಿಸಿಗೆ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಜಿಲ್ಲೆಯ ಮತ್ತು ರಾಜ್ಯದ ಎಲ್ಲ ನಾಯಕರೊಂದಿಗೆ ಮಾತನಾಡಿದ್ದೇನೆ. ಬಹಳ ಗಂಭೀರವಾಗಿ ಪ್ರಯತ್ನಿಸುತ್ತಿದ್ದೇನೆ. ಇದು ತನ್ನ ಕೊನೆಯ ಪ್ರಯತ್ನ ಎಂದವರು ತಿಳಿಸಿದ್ದಾರೆ.