ಸಂಪಾಜೆ ಗ್ರಾಮ ಪಂಚಾಯತ್‌ಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ

0

ಗಾಂಧಿ ಗ್ರಾಮ ಪುರಸ್ಕೃತ ಸಂಪಾಜೆ ಗ್ರಾಮ ಪಂಚಾಯತ್‌ಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಲಭಿಸಿದೆ. ನ.26ರಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯುವ ‘ಹೊಳಪು-2022- ಜನಾಧಿಕಾರದ ಸಂಚಲನ’ ಜನಪ್ರತಿನಿಧಿಗಳ ಕ್ರೀಡಾ ಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಹೇಳಿದ್ದಾರೆ.2021-22ನೇ ಸಾಲಿನಲ್ಲಿ ರಾಜ್ಯ ಸರಕಾರದ ಗಾಂಧಿಗ್ರಾಮ ಪುರಸ್ಕಾರ ಸಂಪಾಜೆ ಗ್ರಾಮ ಪಂಚಾಯತ್‌ಗೆ ಒಲಿದು ಬಂದಿತ್ತು.