ಗುತ್ತಿಗಾರು ಶಾಲೆಯಲ್ಲಿ ಮೇಳೈಸಿದ ಮೆಟ್ರಿಕ್ ಮೇಳ

0

ಗುತ್ತಿಗಾರಿನ ಸ.ಹಿ.ಪ್ರಾ.ಶಾಲೆಯಲ್ಲಿ ನ.14 ರಂದು ಮೆಟ್ರಿಕ್ ಮೇಳ ಮೈಳೈಸಿದೆ. ನ.14 ರಂದು ಮಕ್ಕಳ ದಿನಾಚರಣೆ ಹಾಗೂ ಮೆಟ್ರಿಕ್ ಮೇಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರಂಭದಲ್ಲಿ ಜವಹರಲಾಲ್ ನೆಹರೂ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಬಳಿಕ ಮೆಟ್ರಿಕ್ ಮೇಳವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಕುಲಶ್ರೀ ಬಾಕಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ, ಎಸ್.ಡಿ.ಎಂ.ಸಿ.ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ಲೊಕೇಶ್ ಎಸ್ ಎನ್ ಮಕ್ಕಳ ದಿನಾಚರಣೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ಶಶಿಧರ ಮಾವಿನಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಚೈತ್ರಾ ಬಿ ಆರ್ ವಂದಿಸಿದರು.