ಎನ್ ಎಸ್ ಯು ಐ ವತಿಯಿಂದ ಸಾಂದೀಪ್ ವಿಕಲಚೇತನ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ

0

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸಾಂದೀಪ್ ವಿಕಲಚೇತನ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ನೆರವೇರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ವಹಿಸಿ ಮಾತಾಡಿದ ಇವರು ಎಲ್ಲಾ ವಿದ್ಯಾರ್ಥಿಗಳ ಮನಸ್ಥಿತಿಯಂತೆ ವಿಕಲಚೇತನ ವಿದ್ಯಾರ್ಥಿಗಳು ಸಂಭ್ರಮಾಚರಣೆಯನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೇವೆ ಎಂದು ಹೇಳಿದರು, ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ತಿಂಡಿ ವಿತರಿಸಿ ತಂಪಾದ ಪಾನೀಯನ್ನು ವಿತರಿಸಿದರು, ಈ ಸಂದರ್ಭದಲ್ಲಿ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿ ಶಹಾಲ್ ಕೆ ಎಸ್ ಕಾರ್ಯದರ್ಶಿ ಸಂತೋಷ್ ಜೆ ಎಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.