ಜಾಲ್ಸೂರು: ಕದಿಕಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಸಾಮೂಹಿಕ ಹುಟ್ಟುಹಬ್ಬ ಆಚರಣೆ

0

ಜಾಲ್ಸೂರು ಕದಿಕಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಹಾಗೂ ಸಾಮೂಹಿಕ ಹುಟ್ಟುಹಬ್ಬ ಆಚರಿಸಲಾಯಿತು. ಡಿಸಿಸಿ ಬ್ಯಾಂಕ್ ಇದರ ನಿತ್ಯ ನಿಧಿ ಸಂಗ್ರಹಕರಾದ ಶೇಖರ್ ಕಾಳಮ್ಮನೆ ಸಭಾಧ್ಯಕ್ಷತೆ ವಹಿಸಿದ್ದರು.


ವಿಶೇಷ ಆಹ್ವಾನಿತರಾಗಿ ನವೋದಯ ಸ್ವಸಹಾಯ ಸಂಘದ ಪ್ರೇರಕಿ ಶ್ರೀಮತಿ ಸುಗಂಧಿಯವರು ಉಪಸ್ಥಿತರಿದ್ದರು. ಮತ್ತು ಲೀಲಾವತಿ ಕೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಶ್ರೀ ಶಕ್ತಿ ಸಂಘದ ಸದಸ್ಯೆ ಶ್ರೀಮತಿ ಸೀತು ವೇದಿಕೆಯಲ್ಲಿದ್ದರು. ಶ್ರೀಮತಿ ಸುಗಂಧಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.


ಪುಟಾಣಿ ಮಕ್ಕಳು ಪ್ರಾರ್ಥನೆ ಮಾಡಿದರು ಮಕ್ಕಳ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಅಂಗನವಾಡಿ ಸಹಾಯಕಿ ಜಯಂತಿ ಮತ್ತು ಸ್ತ್ರೀಶಕ್ತಿ ಸಂಘದ ವಿಶೇಷ ಹಾಗು ನೀಡಿ ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.